ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 70 ಸ್ಥಾನ ದಾಟುವುದಿಲ್ಲ- ಮಾಜಿ ಸಿಎಂ ಹೆಚ್.ಡಿಕೆ ಭವಿಷ್ಯ.

Promotion

ಬೆಂಗಳೂರು,ಮಾರ್ಚ್,28,2023(www.justkannada.in):  ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 70 ಸ್ಥಾನ ದಾಟುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಬೆಳವಣಿಗೆ ಕಂಡು ಬಿಜೆಪಿ ಕಾಂಗ್ರೆಸ್  ಇವರು ತಳಮಳಗೊಂಡಿದ್ದಾರೆ. ಏಪ್ರಿಲ್ 28ರವರೆಗೂ ನಮ್ಮ ಪ್ರಚಾರ ಮುಂದುವರೆಯುತ್ತದೆ. ಕಾಂಗ್ರೆಸ್ ನಾಯಕರೇ 500 ರೂ ಕೊಟ್ಟು  ಜನ ಸೇರಿಸ್ತೀವಿ ಎಂದಿದ್ದರು ಎಂದು ಟೀಕಿಸಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ಹೊಡೆದಿದ್ದು ಯಾರೆಂದು ಸರ್ಕಾರವೇ ಉತ್ತರ ಕೊಡಬೇಕು. ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿಲ್ಲ. ಈ ವಿಚಾರದಲ್ಲಿ ಮುಸ್ಲೀಂ ಸಮುದಾಯದ ತಾಳ್ಮೆ ಮೆಚ್ಚಬೇಕು. ಮುಸ್ಲೀಂ ಸಮುದಾಯ ಪ್ರತಿಭಟನೆ ಮಾಡಿದರ ಏನಾಗುತ್ತಿತ್ತು ಎಂದು ಹೆಚ್.ಡಿಕೆ ಹೇಳಿದರು.

Key words: Congress – BJP -not cross -70 seats – former CM-H.D Kumaraswamy