ಬಿಎಸ್ ವೈ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣ: ಕಾಂಗ್ರೆಸ್ ಮುಖಂಡರನ್ನ ಬಂಧಿಸಲಾಗಿದೆ- ಸಿಎಂ ಬಸವರಾಜ ಬೊಮ್ಮಾಯಿ.

ಕಲ್ಬುರ್ಗಿ,ಮಾರ್ಚ್,28,2023(www.justkannada.in): ಬಿಎಸ್ ವೈ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರನ್ನ ಬಂಧಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ  ಸಿಸಿಟಿವಿಯಲ್ಲಿ ಕೈನಾಯಕರು ಸೆರೆಯಾಗಿದ್ದಾರೆ. ಕಾಂಗ್ರೆಸ್ ನಾಯಕರನ್ನ ಬಂಧಿಸಲಾಗಿದೆ.  ಬಂಧಿತ ಮೂವರು ಕಾಂಗ್ರೆಸ್ ಮುಖಂಡರು.

ಕಾಂಗ್ರೆಸ್ ಪಕ್ಕಾ ಪ್ಲಾನ್ ಮಾಡಿ ಕೃತ್ಯವೆಸಗಿದ್ದಾರೆ.  ಇದು ವ್ಯವಸ್ಥಿತ ಷಡ್ಯಂತ್ರ. ಕಾಂಗ್ರೆಸ್ ನಾಯಕರು ಮೀಟಿಂಗ್ ಮಾಡಿ ಕೃತ್ಯವೆಸಗಿದ್ದಾರೆ. ಬಂಜಾರ ಜನಾಂಗದ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.

Key words: stone pelting – B.S yeddyurappa—residence-Congress- leaders – arrested-CM Basavaraja Bommai.