ಬಿಜೆಪಿಯಿಂದ 10 ಕೋಟಿ ಆಫರ್ ವಿಚಾರ- ಸ್ಪಷ್ಟನೆ ನೀಡಿದ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್..

Promotion

ಮೈಸೂರು,ಜೂ,20,2019(www.justkannada.in): ಬಿಜೆಪಿಯಿಂದ 10ಕೋಟಿ ಆಫರ್ ವಿಚಾರ‌ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್ . ನನಗೆ ಆ ರೀತಿ ಯಾವುದೇ ಕರೆ ಬಂದಿಲ್ಲ. ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಟಿ.ನರಸೀಪುರ ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್ , ನಾನು ಸಿಎಂ ಕುಮಾರಣ್ಣನ ನೆರಳಲ್ಲಿ ಬಂದವನು.ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಾನು ಕುಮಾರಣ್ಣನ ಜೊತೆಯೇ ಇರ್ತಿನಿ ಜೆಡಿಎಸ್ ಬಿಡಲ್ಲ ಎಂದರು.

ಬಿಜೆಪಿಯ ಕೆಲ ಶಾಸಕರು ನನ್ನ ಸ್ನೇಹಿತರು. ನಾವೆಲ್ಲ ಒಟ್ಟಾಗಿ ಸೇರಿ ಮಾತಾಡ್ತೀವಿ. ಆದರೆ ನನಗೆ ಯಾರು ಕೂಡ ಬಿಜೆಪಿಗೆ ಬರುವಂತೆ ಹೇಳಿಲ್ಲ. ಇದೆಲ್ಲ ಕೇವಲ ಊಹಾಪೋಹ ಎಂದು ಶಾಸಕ ಅಶ್ವಿನ್ ಸ್ಪಷ್ಟನೆ ನೀಡಿದರು.

Key words: 10 crores -offer – BJP-JDS MLA- Ashwin Kumar- clarified.