ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಶಾಸಕ ಸುಧಾಕರ್ ನೇಮಕ…

ಬೆಂಗಳೂರು,ಜೂ,20,2019(www.justkannada.in): ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕ. ಡಾ.ಸುಧಾಕರ್ ಅವರನ್ನ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಸಮ್ಮಿಶ್ರ ಸರ್ಕಾರ ರಕ್ಷಣೆ ಮಾಡಲು ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಕೆಲಸಕ್ಕೆ ಮೈತ್ರಿ ಪಕ್ಷಗಳು ಮುಂದಾಗಿವೆ. ಈ ನಡುವೆ  ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ಶಾಸಕ ಸುಧಾಕರ್ ರನ್ನ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಇಂದು ಬೆಳಿಗ್ಗೆ ಹಾಲಿ ಅಧ್ಯಕ್ಷ ಜಯರಾಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಸುಧಾಕರ್ ಹೆಸರು ಘೋಷಿಸಿ ನಂತರ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಡೆಹಿಡಿದಿದ್ದರು. ಇದೀಗ ಶಾಸಕ ಸುಧಾಕರ್ ಒತ್ತಡಕ್ಕೆ ಸಿಎಂ ಮಣಿದಿದ್ದಾರೆ ಎನ್ನಲಾಗಿದೆ.

Key words: MLA Sudhakar –appointed- Karnataka Pollution Control Board -Chairman