ಪ್ರತ್ಯೇಕ ರಾಜ್ಯ ಬಗ್ಗೆ ಉಮೇಶ್ ಕತ್ತಿ ಹೇಳಿಕೆ ವಿಚಾರ: ಸರ್ಕಾರದಲ್ಲಿ ಅಂತಾ ಆಲೋಚನೆ ನಡೆದಿಲ್ಲ ಎಂದ ಸಚಿವ ಗೋವಿಂದ ಕಾರಜೋಳ.

ಬೆಳಗಾವಿ,ಜೂನ್,24,2022(www.justkannada.in): ಉತ್ತರ ಕರ್ನಾಟಕ  ಪ್ರತ್ಯೇಕ ರಾಜ್ಯಗಳಾಗಲಿದೆ. ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳು ಉದಯವಾಗಲಿವೆ ಎಂದು  ಸಚಿವ ಉಮೇಶ್ ಕತ್ತಿ ನಿನ್ನೆ ನೀಡಿದ್ಧ ಹೇಳಿಕೆ  ಕುರಿತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿರುವ ಗೋವಿಂದ ಕಾರಜೋಳ,  ಪ್ರತ್ಯೇಕ ರಾಜ್ಯದ ಬಗ್ಗೆ ಉಮೇಶ್ ಕತ್ತಿ ಅವರ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಸರ್ಕಾರದಲ್ಲಿ ಅಂತಾ ಆಲೋಚನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಬೆಳಗಾವಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ಧ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕ ಸೇರಿದಂತೆ ಎರಡು ರಾಜ್ಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ. ಇವೆರಡು ಸೇರಿ ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳು ಉದಯವಾಗಲಿವೆ ವಿಚಿತ್ರ ಹೇಳಿಕೆ ನೀಡಿದ್ದರು.

Key words: Umesh katti-statement -separate state- Minister -Govinda Karajola