Friday, September 25, 2026

BDA Apartments

ಮೈಸೂರಿನ ಜ್ಞಾನಬುತ್ತಿಯಿಂದ UGC-NET ಪರೀಕ್ಷೆಗೆ ಉಚಿತ ತರಬೇತಿ BDA JK_Adv BDA Adv
Home Front Page ಮೈಸೂರಿನ ಜ್ಞಾನಬುತ್ತಿಯಿಂದ UGC-NET ಪರೀಕ್ಷೆಗೆ ಉಚಿತ ತರಬೇತಿ

ಮೈಸೂರಿನ ಜ್ಞಾನಬುತ್ತಿಯಿಂದ UGC-NET ಪರೀಕ್ಷೆಗೆ ಉಚಿತ ತರಬೇತಿ

ಮೈಸೂರಿನ ಜ್ಞಾನಬುತ್ತಿಯಿಂದ UGC puli

ಮೈಸೂರು,ನವೆಂಬರ್,28,2024 (www.justkannada.in): ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು 2025ರ ಜನವರಿ ತಿಂಗಳಲ್ಲಿ ನಡೆಸಲಿರುವ ಕಾಲೇಜು ಸಹಾಯಕ ಪ್ರಾಧ್ಯಾಪಕರ ಮತ್ತು ಕಿರಿಯ ಶಿಷ್ಯವೇತನ ಸಂಶೋಧನಾ ಸಹಾಯಕರ ಅರ್ಹತಾ (UGC-NET) ಪರೀಕ್ಷೆಗೆ ಉಚಿತ ತರಬೇತಿಯನ್ನು ನೀಡಲಿದೆ.

ಆಸಕ್ತರು ದಿನಾಂಕ: 05.12.2024 ರೊಳಗಾಗಿ ಸಂಜೆ 5:30ರಿಂದ 7:30ರವರೆಗೆ ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಹೆಚ್. ಬಾಲಕೃಷ್ಣ (9448117455) ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಯೋಜಕರಾದ ಸಿ.ಕೆ. ಕಿರಣ್‌ ಕೌಶಿಕ್ (9972830857) ಕೆ.ವೈ ನಾಗೇಂದ್ರ (8296788251) ಸಂಪರ್ಕಿಸಬಹುದು.

Key words: Free coaching, UGC-NET exam, Mysore, Jnanabutti