ಏ.2ರಿಂದ ಮೈಸೂರು ಅರಮನೆ ಆವರಣದಲ್ಲಿ ‘ಯುಗಾದಿ ಸಂಗೀತೋತ್ಸವ’.

ಮೈಸೂರು,ಮಾರ್ಚ್,30,2022(www.justkannada.in): ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 2ರಿಂದ ಏಪ್ರಿಲ್ 5ರವರೆಗೆ ಅರಮನೆ ಆವರಣದಲ್ಲಿ ಯುಗಾದಿ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ಅರಮನೆ ಮಂಡಳಿಯ ಉಪ ನಿರ್ದೇಶಕ  ಸುಬ್ರಮಣ್ಯ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಯುಗಾದಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಂಜೆ‌.7ರಿಂದ 8ರವರೆಗೆ ಕಾರ್ಯಕ್ರಮ ನಡೆಯಲಿದೆ.

ಗಾಯಕಿ ಅನನ್ಯ ಭಟ್, ಕೊಳಲು ವಾದಕ ಪ್ರವೀಣ್ ಗೊಡಗಿಂಡಿ, ಮೈಸೂರು ಮಂಜುನಾಥ್ ಸಹೋದರ ರಿಂದ ವಿವಿಧ ಕಾರ್ಯಕಮಗಳು ನಡೆಯಲಿವೆ. ಈ ವೇಳೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕ ರದ್ದಾಗಲಿದೆ ಎಂದು ತಿಳಿಸಿದ್ದಾರೆ.

Key words: ugadi festival- Music Festival-mysore palace