Sunday, August 2, 2026

BDA Apartments

Home Cinema ಉಡುಪಿ ಕಾರ್ಕಳದ ಬೆಡಗಿಗೆ ‘ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ’ ಕಿರೀಟ !

ಉಡುಪಿ ಕಾರ್ಕಳದ ಬೆಡಗಿಗೆ ‘ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ’ ಕಿರೀಟ !

ಉಡುಪಿ, ಜೂನ್ 29, 2019(www.justkannada.in): ಉಡುಪಿ ಸಮೀಪದ ಬೆಳ್ಮಣ್ಣುವಿನಲ್ಲಿ ಜನಿಸಿದ ಪ್ರಿಯಾ ಸೆರಾವೋ ಪ್ರತಿಷ್ಠಿತ “ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ” ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಕಾರ್ಕಳ ತಾಲೂಕಿನ ಬೆಳ್ಮಣ್ಣು ಮೂಲದವರಾದ ಸೆರಾವೋ ವಿಶ್ವಾದ್ಯಂತದ 26 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.26 ವರ್ಷದವರಾಗಿದ್ದು ವಿಕ್ಟೋರಿಯಾ ವಿವಿ ಕಾನೂನು ಪದವೀಧರೆಯಾಗಿರುವ ಪ್ರಿಯಾ ಸೆರಾವೋ ಆಸ್ಟ್ರೇಲಿಯಾ ಮೆಲ್ಬೋರ್ನ್ ನಲ್ಲಿ ಉದ್ಯೋಗದಲ್ಲಿದ್ದಾರೆ.

ಅವರಿಗೆ ಹನ್ನೊಂದು ವರ್ಷಗಳಿದ್ದಾಗ ಅವರ ಕುಟುಂಬ ಆಸ್ಟ್ರೇಲಿಯಾಗೆ ವಲಸೆ ಹೋಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಬಳಿಕ ಮಾತನಾಡಿದ ಸೆರಾವೋ “ನನ್ನ ಗೆಲುವು ಸಾಂಸ್ಕೃತಿಕ ವೈವಿದ್ಯತೆ ಸಂದ ಗೌರವ” ಎಂದಿದ್ದಾರೆ.