“ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು” : ಸಚಿವ ಬಿ.ಸಿ.ಪಾಟೀಲ್

ಮೈಸೂರು,ಜನವರಿ,19,2021(www.justkannada.in) : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು. ಮಾನಸಿಕವಾಗಿ ಸ್ವಲ್ಪ ವ್ಯತ್ಯಾಸ ಆಗಿದ್ರೆ ಹೋಗಿ ಆಸ್ಪತ್ರೆಗೆ  ಸೇರಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕರ್ನಾಟಕದ ಗಡಿ ವಿಚಾರಕ್ಕೆ ಬರಬೇಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.jkಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಬೆಳಗಾವಿ ಗಡಿ ಖ್ಯಾತೆ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ಮೆಂಟಲ್ ಆಸ್ಪತ್ರೆ ಸೇರಿಕೊಂಡು ಸರಿಮಾಡಿಕೊಳ್ಳಲಿ. ಕರ್ನಾಟಕದ  ಒಂದು  ಸೂಜಿಗಾತ್ರದ  ಭೂಮಿಯನ್ನ ಮಹಾರಾಷ್ಟ್ರಕ್ಕೆ ನೀಡುವುದಿಲ್ಲ ಎಂದರು.

ಮಹಾಜನ ವರದಿಯೇ ಫೈನಲ್. ಠಾಕ್ರೆ  ರಾಜಕೀಯ ತೆವಲಿಗೆ ಹೀಗೆ ಮಾತನಾಡುತ್ತಿದ್ದಾರೆ. ಅಲ್ಲಿ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಇಲ್ಲಿ  ಹುಳಿ ಹಿಂಡುತ್ತಿದ್ದಾರೆ. ಅವರ  ನಡೆಯಿಂದ ರಾಜ್ಯದಲ್ಲಿರುವ ಮರಾಠಿಗರಿಗೆ ಅಪಖ್ಯಾತಿ  ಬರಲಿದೆ ಎಂದು ಕಿಡಿಕಾರಿದರು.Udbhav Thackeray-Must-Mental-Minister-B.C.Patil

ಎಲ್ಲೋ  ಒಂದಿಬ್ಬರು  ಮಹಾರಾಷ್ಟ್ರ  ಪರ  ಕೂಗುವ  ಕಿಡಿಗೇಡಿಗಳನ್ನು  ಬಿಟ್ಟರೆ ಇಲ್ಲಿ  ಯಾವುದೇ  ಸಮಸ್ಯೆ  ಇಲ್ಲ. ಸುಮ್ಮನೆ ಹೇಳಿಕೆ ನೀಡಿ  ಇಲ್ಲಿರುವವರ  ಬದುಕಿಗೂ ಸಮಸ್ಯೆ  ಮಾಡಬೇಡಿ. ಕರ್ನಾಟಕ  ಭೂಮಿ‌ ಮಹಾರಾಷ್ಟ್ರಕ್ಕೆ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

key words :Udbhav Thackeray-Must-Mental-Minister-B.C.Patil