ಯು ಡಿಜಿಟಲ್ ನೆಟ್ ವರ್ಕ್ 3ನೇ ವಾರ್ಷಿಕೋತ್ಸವ ಸಂಭ್ರಮ: ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್

ಮೈಸೂರು, ಮಾರ್ಚ್ 04, 2023 (www.justkannada.in): ಮೈಸೂರಿನ ಸೈಲೆಂಟ್ ಶೋರ್ಸ್ ಆ್ಯಂಪಿ ಥಿಯೇಟರ್ ನಲ್ಲಿ ಯು ಡಿಜಿಟಲ್ ನೆಟ್ ವರ್ಕ್’ನ 3ನೇ ವಾರ್ಷಿಕೋತ್ಸವ  ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಸುದ್ದಿ ವಾಹಿನಿಗಳಿಗೆ ಮೂರು ‘ವಿಟಮಿನ್’ಗಳೆಂದರೆ ಟಿವಿ ವೀಕ್ಷಕರು, ಟಿವಿಯನ್ನು ಮನೆಗೆ ಕೊಂಡೊಯ್ಯುವ ಕೇಬಲ್ ಆಪರೇಟರ್ ಗಳು, ಸುದ್ದಿ ವಾಹಿನಿಗಳಿಗೆ ಸಾಕಷ್ಟು ‘ಆಹಾರ’ ನೀಡುವ ರಾಜಕಾರಣಿಗಳು ಎಂದು ತಮಾಷೆ ಮಾಡಿದರು.

ಸಾಕಷ್ಟು ಪೈಪೋಟಿ ನಡುವೆ ಯು ಡಿಜಿಟಲ್ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ. ಇದಕ್ಕೆ ಯು ಡಿಜಿಟಲ್ ತಂಡದ ಶ್ರಮ ಹಾಗೂ ಯು ಡಿಜಿಟಲ್ ನ ಮಂಜುನಾಥ್ ಅವರ ಶ್ರಮ ಹೆಚ್ಚಿದೆ. ಇದೇ ರೀತಿ ಯು ಡಿಜಿಟಲ್ ತಂಡ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಕನ್ನಡಿಗರು ಹೊರ ರಾಜ್ಯಗಳಿಗೆ ಹೋಗಿ ವಹಿವಾಟು ಮಾಡುವವರು ಕಡಿಮೆ. ನಮ್ಮ ರಾಜ್ಯದವರು ಹೊರಗಡೆ ಹೋಗಿ ವಹಿವಾಟು ನಡೆಸಲು ಸಾಕಷ್ಟು ಶಕ್ತಿ ಬೇಕು. ಆದರೆ ಯು ಡಿಜಿಟಲ್ ಪಕ್ಕದ ಆಂಧ್ರ ಪ್ರದೇಶಕ್ಕೂ ತಮ್ಮ ಸೇವೆಯನ್ನು ವಿಸ್ತರಿಸುವುದು ಹೆಮ್ಮೆಯ ವಿಚಾರ. ಕನ್ನಡಿಗರು ಹೊರ ರಾಜ್ಯದಲ್ಲಿ ಹೋಗಿ ಉದ್ಯಮ ನಡೆಸುವ ಉತ್ಸಾಹ ತೋರುವುದು ಕಡಿಮೆ. ಆದರೆ ಈ ನಿಟ್ಟಿನಲ್ಲಿ ಯು ಡಿಜಿಟಲ್ ಹೆಜ್ಜೆ ಇಟ್ಟಿರುವುದಕ್ಕೆ ಶುಭ ಹಾರೈಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಲಕ್ಷಾಂತರ ವೀಕ್ಷಕರನ್ನು ಹೊಂದಿರುವ ಯು ಡಿಜಿಟಲ್ ಮನೆ ಮಾತಾಗಿರುವುದು ಶ್ಲಾಘನೀಯ. ಕೇಬಲ್ ಆಪರೇಟರ್ ಗಳ ಕೈ ಹಿಡಿದು ನಡೆಸುತ್ತಿರುವ ಸಂಸ್ಥೆ ಕಾರ್ಯವನ್ನು ಶ್ಲಾಘಿಸಿದರು.

ಶಾಸಕ ಎಲ್.ನಾಗೇಂದ್ರ, ನ್ಯೂಸ್ ಫಸ್ಟ್ ಮುಖ್ಯಸ್ಥ ರವಿಕುಮಾರ್, ನೆಟ್ ವರ್ಕ್ 18 ಮುಖ್ಯಸ್ಥ ಡಿ.ಪಿ.ಸತೀಶ್. ಟಿವಿ9 ಕನ್ನಡದ ವ್ಯವಸ್ಥಾಪಕ ಸಂಪಾದಕ ಆರ್.ಶ್ರೀಧರನ್ ಇತರರು ಪಾಲ್ಗೊಂಡು ಮಾತನಾಡಿದರು.

ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಝೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಅವರನ್ನು ಪುರಸ್ಕರಿಸಲಾಯಿತು. ಇದೇ ವೇಳೆ ಪ್ರಮುಖ ಬ್ರಾಡ್ ಕ್ಯಾಸ್ಟರ್ ಗಳಾದ ಜೀ, ಕಲರ್ಸ್, ಸ್ಟಾರ್, ಸೋನಿ, ಉದಯ ಹಾಗೂ ಡಿಸ್ಕವರಿ ವಾಹಿನಿಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಇದರ ಜತೆಗೆ ಪ್ರತಿನಿಧಿ ಪತ್ರಿಕೆಯ ಸಿ.ಕೆ.ಮಹೇಂದ್ರ, ವಿಜಯ ಕರ್ನಾಟಕ ಪತ್ರಿಕೆಯ ಚೀ.ಜ.ರಾಜೀವ, ವಿಜಯವಾಣಿ ಪತ್ರಿಕೆಯ ಎಂ.ಆರ್.ಸತ್ಯನಾರಾಯಣ, ಟಿವಿ 9ನ ರಾಮ್, ಆಂದೋಲನ ಪತ್ರಿಕೆಯ ರಮೇಶ್ ನಾಯಕ, ನ್ಯೂಸ್ ಫಸ್ಟ್’ನ ರವಿ ಪಾಂಡವಪುರ, ದೂರದರ್ಶನದ ಬಿ.ಜೆ.ಜಯಂತ್, ವಿಸ್ತಾರ ನ್ಯೂಸ್’ನ ರಂಗಸ್ವಾಮಿ ಎಂ. ಮಾದಾಪುರ, ಪವರ್ ಟಿವಿಯ ಬಿ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.