ಎರಡು ಮೂರು ದಿನಗಳಲ್ಲಿ ಚಿತ್ರರಂಗಕ್ಕೆ ಸಿಹಿಸುದ್ಧಿ-  ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಸೆಪ್ಟಂಬರ್,21,2021(www.justkannada.in):  ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು ಇದೀಗ  ಎಲ್ಲ ಉದ್ಯಮಗಳು ಸಹಜಸ್ಥಿತಿಗೆ ಮರಳುತ್ತಿವೆ. ಆದರೆ ಚಿತ್ರೋದ್ಯಮ ಮಾತ್ರ ಸಂಕಷ್ಟದಲ್ಲೇ ಇದ್ದು ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ರಾಜ್ಯಸರ್ಕಾರಕ್ಕೆ ನಿರ್ಮಾಪಕರು ಮನವಿ ಮಾಡಿದ್ದಾರೆ.

ಈಗ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸುವಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.

 ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅವಕಾಶ ಕುರಿತು ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಚಲನಚಿತ್ರ ಮಂದಿರಗಳಿಗೆ ಮತ್ತು ಅವರಿಗೆಲ್ಲಾ ಸಹಕಾರ ನೀಡಬೇಕು ಎನ್ನುವ ಉದ್ದೇಶ ಸರ್ಕಾರಕ್ಕಿದೆ. ಸಿನಿಮಾ ಮಂದಿರ, ಸಿಬ್ಬಂದಿಗಳಿಗೆ ಬಹಳಷ್ಟು ನಷ್ಟವಾಗಿದೆ ಎಂಬುದಾಗಿ ತಿಳಿದಿದೆ. ಆ ನಿಟ್ಟಿನಲ್ಲಿ ಸರ್ಕಾರ ಸಹಕಾರ ನೀಡುವ ಚರ್ಚೆ ನಡೆಸಿದೆ. ಇನ್ನೊಂದು ಎರಡು ಮೂರು ದಿನಗಳಲ್ಲಿ ಚಿತ್ರರಂಗಕ್ಕೆ ಸಿಹಿಸುದ್ದಿ ನೀಡಲಿದ್ದೇವೆ ಎಂದಿದ್ದಾರೆ.

ಎರಡ್ಮೂರು ದಿನಗಳಲ್ಲಿ  ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಎರಡು ಮೂರು ದಿನಗಳಲ್ಲಿಯೇ ರಾಜ್ಯದಲ್ಲಿ ಥಿಯೇಟರ್ ಗಳ ಹೌಸ್ ಪುಲ್ ಕ್ರಮ ಕುರಿತಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

Key words: Two – three days – film-good news-Health Minister -Dr. K. Sudhakar.

ENGLISH SUMMARY..

Good news for Sandalwood in 2-3 days: Health Minister Dr. K. Sudhakar
Bengaluru, September 21, 2021 (www.justkannada.in): Karnakata film producers’ have appealed to the State Government to allow screening of movies in cinema halls with 100% seating capacity as the film industry has been unable to recover from the losses due to the COVID-19 Pandemic lockdown. The film industry has continued to suffer even as the number of COVID cases has declined.
Presently, the State Government has allowed the screening of movies in the cinema halls with 50% seating capacity. The Sandalwood film producers’ today visited Health Minister K. Sudhakar and appealed to allow screening of movies with 100% seating capacity.
In his response, the Health Minister informed that the State Government is well aware of the condition of the film industry and the problems it is facing. He informed that discussions are being held in this regard and good news will be given to them within 2 or 3 days.
“We will conduct the technical advisory committee meeting within 2-3 days and arrive at a decision after discussing with the Chief Minister. A decision will be taken regarding screening of movies in cinema halls with 100% seating capacity,” he added.
Keywords: Health Minister/ Dr. K. Sudhakar/ film industry/ Sandalwood/Cinema halls/screening/ 100% seating capacity