ವಿದ್ಯುತ್ ತಗುಲಿ ಇಬ್ಬರು ಛಾಯಾಗ್ರಾಹಕರು ಸ್ಥಳದಲ್ಲೇ ಸಾವು.

ಮಂಡ್ಯ,ಅಕ್ಟೋಬರ್,22,2022(www.justkannada.in):  ವಿದ್ಯುತ್​  ತಗುಲಿ ಇಬ್ಬರು ಛಾಯಾಗ್ರಾಹಕರು ಸ್ಥಳದಲ್ಲೇ  ಸಾವನ್ನಪ್ಪಿರುವ ಘಟನೆ  ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಲಕ್ಷ್ಮೀ ಫೋಟೋ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಮಧುಸೂದನ ಮತ್ತು ವಿವೇಕ್ ಮೃತಪಟ್ಟ ಛಾಯಾಗ್ರಾಹಕರು.

ದೀಪಾವಳಿ ಹಬ್ಬ ಹಿನ್ನೆಲೆ ಮಧುಸೂದನ ಮತ್ತು ವಿವೇಕ ಸ್ಟುಡಿಯೋ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕಬ್ಬಿಣದ ಬೋರ್ಡ್ ತೆರವುಗೊಳಿಸಿ ಸ್ವಚ್ಛಗೊಳಿಸುತ್ತಿದ್ಧ ವೇಳೆ ವಿದ್ಯುತ್ ತಗುಲಿ ಇಬ್ಬರು ಛಾಯಾಗ್ರಾಹರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Key words: Two- photographers – electric shock- died -on the spot.