ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಪರ್ಮಿಟ್ ರದ‍್ಧು- ಖಾಸಗಿ ಬಸ್ ಮಾಲೀಕರಿಗೆ ಸಚಿವ ಶ್ರೀರಾಮುಲು ವಾರ್ನ್.

ಬಳ್ಳಾರಿ,ಅಕ್ಟೋಬರ್,22,2022(www.justkannada.in):  ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ವಸೂಲಿಗೆ ಮುಂದಾಗಿರುವ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ಪ್ರಯಾಣಿಕರಿಂದ  ದುಪ್ಪಟ್ಟು ಹಣ ವಸೂಲಿ ಮಾಡಿದರೇ ಕ್ರಮ ಕೈಗೊಳ್ಳುತ್ತೇವೆ. ಪರ್ಮಿಟ್ ರದ್ದು ಮಾಡುತ್ತೇವೆ. ಖಾಸಗಿ ಬಸ್ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ ಕ್ರಮ ವಹಿಸಲಾಗುತ್ತದೆ. ಈಗಾಗಲೇ ಈ ಬಗ್ಗೆ ಟಾಸ್ಕ್ ಫೊರ್ಸ್ ರಚನೆ ಮಾಡಲಾಗಿದೆ ಎಂದರು.treat-rate-health-minister-sriramulu-warning-private-hospitals

ಕಳೆದ ಬಾರಿ 110 ಕೇಸ್​ಗಳನ್ನ ದಾಖಲು ಮಾಡಲಾಗಿದೆ. ಸದ್ಯ ಈಗಾಗಲೇ 60 ಕೇಸ್​ಗಳು ದಾಖಲಾಗಿವೆ. ದಾಖಲಾದ ಕೇಸ್​ಗಳನ್ನ ಪರಿಶೀಲಿಸಿ ಪರ್ಮಿಟ್ ರದ್ದು ಮಾಡಲಾಗುವುದು ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಇನ್ನು ದೀಪಾವಳಿ ಹಬ್ಬಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಖಾಸಗಿ ಬಸ್ಸುಗಳು ಟಿಕೆಟ್ ದರ ಏರಿಕೆ ಮಾಡಿವೆ. ಎರಡು ದಿನದ ಹಿಂದೆ ಇದ್ದ ದರಗಳೆಲ್ಲವು ಇಂದು ಡಬಲ್ ಆಗಿವೆ.

Key words: double fee – collect- Permit – cancel-Minister -Sriramulu