Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವು: ಓರ್ವನ ಶವ ಪತ್ತೆ

ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವು: ಓರ್ವನ ಶವ ಪತ್ತೆ

ಬೆಂಗಳೂರು,ಅಕ್ಟೋಬರ್, 22,2024 (www.justkannada.in): ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಶ್ರೀನಿವಾಸ್ (13), ಮಹಾಲಕ್ಷ್ಮೀ(11) ಮೃತಪಟ್ಟ ಅಣ್ಣತಂಗಿ. ಬಾಲಕ ಶ್ರೀನಿವಾಸ್ ಶವ ಪತ್ತೆಯಾಗಿದೆ. ಮಹಾಲಕ್ಷ್ಮೀ(11) ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಕೆಂಗೇರಿ ಕೆರೆ ಪಕ್ಕದಲ್ಲಿ ತಾಯಿಯೊಂದಿಗೆ ಇಬ್ಬರು ಮಕ್ಕಳು ವಾಸವಾಗಿದ್ದರು. ಈ ಮಧ್ಯೆ  ನಿನ್ನೆ ಸಂಜೆ 6 ಗಂಟೆ ವೇಳೆ ಆಕಸ್ಮಿಕವಾಗಿ ಕಾಲುಜಾರಿ  ಕೆಂಗೇರಿ ಕೆರೆಯಲ್ಲಿ ಬಿದ್ದಿದ್ದಾರೆ. ಇದೀಗ ಸತತ 3 ಗಂಟೆಗಳ ಕಾರ್ಯಾಚರಣೆ ಬಳಿಕ  ಶ್ರೀನಿವಾಸ್ ಮೃತದೇಹ ಪತ್ತೆಯಾಗಿದೆ.

Key words: Two children, died, slipping, lake