Sunday, September 20, 2026

BDA Apartments

TVK ಭರ್ಜರಿ ಗೆಲುವು: ನಟ ವಿಜಯ್ ಗೆ ಶುಭ ಹಾರೈಸಿದ ನಟ ಶಿವರಾಜ್ ಕುಮಾರ್ BDA JK_Adv BDA Adv
Home Cinema TVK ಭರ್ಜರಿ ಗೆಲುವು: ನಟ ವಿಜಯ್ ಗೆ ಶುಭ ಹಾರೈಸಿದ ನಟ ಶಿವರಾಜ್ ಕುಮಾರ್

TVK ಭರ್ಜರಿ ಗೆಲುವು: ನಟ ವಿಜಯ್ ಗೆ ಶುಭ ಹಾರೈಸಿದ ನಟ ಶಿವರಾಜ್ ಕುಮಾರ್

ಬೆಂಗಳೂರು,ಮೇ,5,2026 (www.justkannada.in): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 108 ಸ್ಥಾನಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಸರ್ಕಾರ ರಚನೆಗೆ ಮುಂದಾಗಿದೆ.

ಇದೀಗ ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ನಟ, ರಾಜಕೀಯ ನಾಯಕ ವಿಜಯ್ ಗೆ ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ಶುಭ ಹಾರೈಸಿದ್ದಾರೆ.

ಇದು ನಿಜವಾಗಿಯೂ ನಿಮಗೆ ಸಂದ ಜನಾರ್ಶೀವಾದದ ಜಯ.  ತೀವ್ರ ಟೀಕೆಗಳ ಸಮಯದಲ್ಲಿ ಮೌನವಾಗಿದ್ದು ನಿಮ್ಮ ಕೆಲಸವೇ ಮಾತನಾಡಲು ಬಿಡುವುದು ಅದೇ ದೊಡ್ಡ ಜಯ. ಪತ್ರಕರ್ತರೊಂದಿಗೆ ಒಂದು ಸಂಭಾಷಣೆಯಲ್ಲಿ ನಾನು ಹೇಳಿದ್ದೆ. ಟಿವಿಕೆ ಅಂದರೆ  ವಿಜಯ್ ಆ್ಯಸ್ ಕಿಂಗ್ ಎಂದಿದ್ದೇ.  ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ. ತಮಿಳುನಾಡಿನ ಜನತೆಗೆ ನೀಡಿದೆಲ್ಲಾ ಭರವಗಳನ್ನ ಈಡೇರಿಸಿ ಸದಾ ಅಭಿವೃದ್ದಿ ಮುಂದುವರೆಯಲಿ ಎಂದು ಹಾರೈಸುತ್ತೇನೆ ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

Key words: TVK, win, Actor, Shivarajkumar,  wishes, actor, Vijay