Wednesday, October 7, 2026

BDA Apartments

ಮೈಸೂರು ನಗರಕ್ಕೆ ಕಬಿನಿ ನದಿ ಮೂಲದಿಂದ ಕುಡಿಯುವ ನೀರನ್ನು ವೃದ್ಧಿಸುವ ಯೋಜನೆ ...
Home Front Page ಶಿರಾ ನೀರಾವರಿ ಯೋಜನೆಗಳಿಗೆ ಬಿಜೆಪಿಯಿಂದ ಅಡ್ಡಗಾಲು- ಕೈ ಅಭ್ಯರ್ಥಿ ಟಿ.ಬಿ ಜಯಚಂದ್ರ ಆರೋಪ…

ಶಿರಾ ನೀರಾವರಿ ಯೋಜನೆಗಳಿಗೆ ಬಿಜೆಪಿಯಿಂದ ಅಡ್ಡಗಾಲು- ಕೈ ಅಭ್ಯರ್ಥಿ ಟಿ.ಬಿ ಜಯಚಂದ್ರ ಆರೋಪ…

ತುಮಕೂರು,ಅಕ್ಟೋಬರ್,31,2020(www.justkannada.in):  ಶಿರಾ ನೀರಾವರಿ ಯೋಜನೆಗಳಿಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಆರೋಪ ಮಾಡಿದ್ದಾರೆ.

ಶಿರಾದಲ್ಲಿ ಇಂದು ಮಾತನಾಡಿದ ಟಿ.ಬಿ ಜಯಚಂದ್ರ, ಹೇಮಾವತಿ ನದಿಯಿಂದ ನೀರು ಬಿಡದಂತೆ ಬಿಜೆಪಿಯವರು ಪತ್ರ ಬರೆದಿದ್ದರು. ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ನೀರು ಹರಿಸಿದ್ದು ನಾನು.  ಕೆರೆಗಳಿಗೆ ನೀರು ಹರಿಸಲು ಸಚಿವ ಮಾದುಸ್ವಾಮಿಯಿಂದಲೂ ಅಡ್ಡಿಯುಂಟಾಗಿದೆ. ಮಾಧುಸ್ವಾಮಿ ಅವರಿಂದ ಏನು ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.

ಈಗ ಬಂದು ಬಿಜೆಪಿಯವರು 6 ತಿಂಗಳಲ್ಲಿ ನೀರುಹರಿಸುವುದಾಗಿ ಹೇಳುತ್ತಿದ್ದಾರೆ. ಇದು ಚುನಾವಣಾ ಗಿಮಿಕ್. ಸಿಎಂ ಬಿಎಸ್ ಯಡಿಯೂರಪ್ಪ 6 ತಿಂಗಳು ಬೇಡ 15 ದಿನಗಳಲ್ಲಿ ನೀರು ಹರಿಸಲಿ ನೋಡೋಣ ಎಂದು ಟಿ.ಬಿ ಜಯಚಂದ್ರ ಸವಾಲು ಹಾಕಿದರು.

Key words: tumakur- shira- by election- congress candidate -TB Jayachandra -accused -BJP