ಆರ್.ಆರ್ ನಗರ ಕಾಂಗ್ರೆಸ್ ಭದ್ರಕೋಟೆ: ನಿನ್ನನ್ನ ಜನ ಬದಲಾವಣೆ ಮಾಡ್ತಾರೆ- ಮುನಿರತ್ನಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ …

kannada t-shirts

ಬೆಂಗಳೂರು,ಅಕ್ಟೋಬರ್,30,2020(www.justkannada.in): ಆರ್.ಆರ್ ನಗರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ನಿನ್ನನ್ನ ಜನ ಬದಲಾವಣೆ ಮಾಡುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದರು.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಆರ್.ಆರ್ ನಗರ ಅಭಿವೃದ್ಧಿ ಮಾಡಿದ್ದೇನೆ ಎಂದು ಮುನಿರತ್ನ ಹೇಳುತ್ತಾರೆ. ಅವರಿಗೆ ಅನುದಾನ ನೀಡಿದ್ದು ಯಾರು..? ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಹಣ ನೀಡಿದ್ದು ನಾನು. ಅಭಿವೃದ್ದಿ ಕೆಲಸಗಳಿಗೆ ಮನೆಯಿಂದ ದುಡ್ಡು ತಂದು ಹಾಕಿದ್ದೀಯಾ ಎಂದು ಪ್ರಶ್ನಿಸಿದರು.

ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಎಂದು ಸಿದ್ಧರಾಮಯ್ಯ ಎಚ್ಚರಿಕೆ ನೀಡಿದರು.

RR nagar- Congress – bastion-people -change.-muniratna- Former CM -Siddaramaiah

ಇನ್ನು ಆರ್.ಆರ್ ನಗರ ಕ್ಷೇತ್ರದಲ್ಲಿ ಅಪರಾಧಪ್ರಕರಣ ಹೆಚ್ಚಾಗುತ್ತಿದೆ.  ಜನರನ್ನ ಹೆದರಿಸಿ ಮತಗಟ್ಟೆಗೆ ಬಾರದಂತೆ  ಮಾಡುತ್ತಿದ್ದಾರೆ. ಮತದಾರರನ್ನ ಹೆದರಿಸಿ ಬೆದರಿಸಿ ಗೆಲ್ಲೋಗೆ ಹೊರಟಿದ್ದಾರೆ. ಎಂದು ಸಿದ್ದರಾಮಯ್ಯ ಹರಿಹಾಯ್ದರು.

Key words: RR nagar- Congress – bastion-people -change.-muniratna- Former CM -Siddaramaiah

 

 

website developers in mysore