ರಾಜ್ಯದ ಹಣಕಾಸು ಸ್ಥಿತಿ ಏನೆಂಬುದು ನನಗೊಬ್ಬನಿಗೆ ಗೊತ್ತು- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ತುಮಕೂರು,ಅ,18,2019(www.justkannada.in):  ರಾಜ್ಯದ ಹಣಕಾಸಿನ ಸ್ಥಿತಿ ಬಗ್ಗೆ ಏನೆಂಬುದು ನನಗೊಬ್ಬನಿಗೆ ಗೊತ್ತು. ಹಿಂದಿನ ಸರ್ಕಾರ ಮುಂದಿನ 5-6 ವರ್ಷದ ಹಣಕ್ಕೆ ಅನುಮೋದನೆ ಮಾಡಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ತುಮಕೂರು ಜಿಲ್ಲೆಯ  ಯೆಡೆಯೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಬಿಎಸ್  ಯಡಿಯೂರಪ್ಪ,  ಈ ಭಾಗಕ್ಕೆ ನೀರಾವರಿಯಲ್ಲಿ ಯಾವ ಬೇಧಭಾವ ಮಾಡಲ್ಲ.  ನನ್ನ ಸ್ವಂತ ಹಣದಲ್ಲಿ ಕಾಮಗಾರಿ ಆರಂಭ ಮಾಡುತ್ತೇನೆ. ರಾಜ್ಯದ ಹಣಕಾಸು ಸ್ಥಿತಿ ಏನೆಂಬುದು ನನಗೊಬ್ಬನಿಗೆ ಗೊತ್ತಿದೆ. ಹಿಂದಿನ ಸರ್ಕಾರ ಐದಾರು ವರ್ಷಗಳಿಗೆ ಹಣಕ್ಕೆ ಅನುಮೋದನೆ ನೀಡಿದೆ. ಸಾಲಮನ್ನಾಗೂ ಹಣ ಹೊಂದಿಸಬೇಕು.  ಹಣದ ಲಭ್ಯತೆ ನೋಡಿ ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದರು.

ಎಲ್ಲಾ ಕ್ಷೇತ್ರಗಳಿಗೂ ಭೇದಭಾವ ಇಲ್ಲದೇ ಅಭಿವೃದ್ಧಿ ಮಾಡಲಾಗುತ್ತದೆ. ಹಿಂದೆಂದೂ ಕಾಣದ ರೀತಿಯಲ್ಲಿ ರಾಜ್ಯದಲ್ಲಿ ನೆರೆ ಆಗಿದೆ. ನೆರೆ ಸಂತ್ರಸ್ತರ ಪರಿಹಾರಕ್ಕೂ ಹಣ ಇನ್ನು ರಾಜ್ಯದ ಹಣಕಾಸಿನ ಸ್ಥಿತಿಗತಿ ತಿಳಿದಿದ್ದೇನೆ. ಏನೆಲ್ಲಾ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ ಎಂದು ಸಿಎಂ ಬಿಎಸ್ ವೈ ನುಡಿದರು.

Key words:  tumakur-I know – state –finance-CM BS Yeddyurappa