ಕುದುರೆ ವ್ಯಾಪಾರ ನಡೆದಿರುವುದು ಸತ್ಯ: ಒಬ್ಬೊಬ್ಬ ಶಾಸಕರಿಗೆ 30 ಕೋಟಿ ಆಫರ್- ವಿಧಾನಸಭೆಯಲ್ಲಿ  ಕಾಂಗ್ರೆಸ್ ಸದಸ್ಯರಿಂದ ಆಕ್ರೋಶ….

ಬೆಂಗಳೂರು,ಜು,19,2019(www.justkannada.in): ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆದಿರುವುದು ಸತ್ಯ. ನಮ್ಮ ಶಾಸಕರಿಗೆ 30 ಕೋಟಿ ಆಫರ್ ಕೊಟ್ಟಿರುವುದು  ಸತ್ಯ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಸಭೆಯಲ್ಲಿ ತಮಗೆ ಬಿಜೆಪಿ 5ಕೋಟಿ ಹಣ ನೀಡಿದ್ದ ಬಗ್ಗೆ  ಶಾಸಕ ಕೆ. ಶ್ರೀನಿವಾಸ್ ಗೌಡ ಆರೋಪ ಮಾಡಿದರು. ಈ ಸಂಬಂಧ ಸದನದಲ್ಲಿ ಕುದುರೆವ್ಯಾಪಾರದ ಬಗ್ಗೆ ಚರ್ಚೆಯಾಯಿತು. ಈ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಸಚಿವ ಕೃಷ್ಣೇಬೈರೇಗೌಡ, 30 ಕೋಟಿ ಹಣ ಕೊಟ್ಟಿರುವುದು ನಿಜ. ಇದೂ ಕಡತಕ್ಕೆ ಹೋಗಲಿ ಎಂದು ಆಗ್ರಹಿಸಿದರು.

ಒಬ್ಬೊಬ್ಬ ಶಾಸಕರಿಗೆ 30 ಕೋಟಿ ಕೊಟ್ಟಿದ್ದಾರೆ. ಈ ಮಾತನ್ನ ಯಾರೋ ಆಡಿರುವುದಲ್ಲ. ಸದನದಲ್ಲಿಯೇ ಮಾತನಾಡಿರುವುದು. ನೂರಾರು ಕೋಟಿ ಶಾಸಕರಿಗೆ ಸುರಿಯುತ್ತಿದ್ದಾರೆ. ಈ ಬಗ್ಗೆ ಮಾಧುಸ್ವಾಮಿ ಅವರು ಯಾಕೆ ಮಾತನಾಡುತ್ತಿಲ್ಲ ನಿಮಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

Key words: true -30 crores -offer -one MLA- Congress -assembly