ನ್ಯಾಚುರಲ್ ಫ್ಲೇವರ್ ಐಸ್ ಕ್ರೀಂ ತಿನ್ಬೇಕಾ ? ಡುಮಾಂಟ್ ಟ್ರೈ ಮಾಡಿ !

ಬೆಂಗಳೂರು, ಜುಲೈ 19, 2019 (www.justkannada.in): ಹೊಚ್ಚಹೊಸ ರುಚಿಯೊಂದಿಗೆ ಐಸ್‍ಕ್ರೀಮ್ ಮತ್ತು ಮಿಲ್ಕ್ ಶೇಕ್‍ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ ಡುಮಾಂಟ್ !

ಬೆಂಗಳೂರಿನ ಕೋಡಿಹಳ್ಳಿಯ ಸ್ಟರ್‍ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮ ನಡೆಯಿತು. ಮ್ಯೂಜಿಕ್ ವಿತ್ ಮಿಲ್ಕ್ ಶೇಕ್ ಹೆಸರಿನಲ್ಲಿ ನಡೆದ ವಿನೂತನ ಕಾರ್ಯಕ್ರಮ ನಗರದ ಜನತೆಯನ್ನ ಆಕರ್ಷಿಸಿತು.

ರೈತರಿಂದ ಶೇಖರಿಸಿದ ಹಣ್ಣು, ಹಾಲಿನಿಂದ ಐಸ್‍ಕ್ರೀಮ್, ಮಿಲ್ಕ್ ಶೇಕ್ ತಯಾರಿಸಿ ಗ್ರಾಹಕರಿಗೆ ಒದಗಿಸಲು ಡುಮಾಂಟ್ ಮುಂದಾಗಿದೆ.

ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆ ಎಂಡಿ ಸುನೀಲ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದ ಸುಮಾರು 15 ಬಗೆಯ ಪ್ಲೇವರ್‍ಗಳನ್ನು ಡುಮಾಂಟ್ ಪರಿಚಯಿಸುತ್ತಿದೆ. ಒಂದ್ಕಡೆ ಐಸ್ ಕ್ರೀಮ್, ಮತ್ತೊಂದ್ಕಡೆ ಮಿಲ್ಕ್ ಶೇಕ್ ಸಹ ತಯಾರಿಸುತ್ತಿರೋ ಸಂಸ್ಥೆಗಳು ಗುಣಮಟ್ಟ ಕಾಯ್ದುಕೊಳ್ತಿರೋ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಡುಮಾಂಟ್ ಸಹ ಒಂದು. ರುಚಿ, ಶುಚಿ, ಕ್ವಾಲಿಟಿ, ಕ್ವಾಂಟಿಟಿ ವಿಷಯದಲ್ಲಿ ಎಳಷ್ಟೂ ರಾಜಿಯಾಗದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಡುಮಾಂಟ್. ಬೆಂಗಳೂರು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಇದೇ ತಿಂಗಳ 19 ರಿಂದ ಸ್ಟೋರ್‍ಗಳು ಗ್ರಾಹಕರ ಸೇವೆಗೆ ಲಭ್ಯವಿರಲಿವೆ ಎಂದು ತಿಳಿಸಿದರು.