ಓಮ್ನಿ ಕಾರಿಗೆ ಲಾರಿ ಡಿಕ್ಕಿ : ಮೂವರು ಮಹಿಳೆಯರು ಸಾವು…

ಆಂಧ್ರಪ್ರದೇಶ,ಡಿಸೆಂಬರ್,26,2020(www.justkannada.in):  ಓಮ್ನಿ ಕಾರಿಗೆ ಲಾರಿ ಡಿಕ್ಕಿಯಾಗಿ ಕರ್ನಾಟಕದ ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯ ಬಳಿ ನಡೆದಿದೆ.Teachers,solve,problems,Government,bound,Minister,R.Ashok

ತಿರುಪತಿಯ ಚಂದ್ರಗಿರಿ ಮಂಡಲದ ನೆಂಡ್ರಗುಂಟ ಬಳಿ ಈ ದುರ್ಘಟನೆ ನಡೆದಿದೆ. ಮೃತ ಇಬ್ಬರು ಮಹಿಳೆಯರು ಕರ್ನಾಟಕ ಮೂಲದವರು ಎನ್ನಲಾಗಿದೆ. ಮತ್ತೋರ್ವ ಮಹಿಳೆ ಬಂಗಾರುಪಾಲೆಂನ ರಾಣಿ ಎಂದು ಗುರುತಿಸಲಾಗಿದೆ. ಮೃತ ಮೂವರು ಮಹಿಳೆಯರು ತಿರುಮಲದ ವೆಂಕಟೇಶ್ವರನ ದರ್ಶನ ಪಡೆದು ಹಿಂತಿರುಗುತ್ತಿದ್ದ ವೇಳೆ ಇವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರಿಗೆ ಲಾರಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ 6 ಮಂದಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Truck -collision – Omni car-death – three-andrapradesh