BREAKING NEWS:  ರೇಟಿಂಗ್ ನಲ್ಲಿ” TV 9” ಹಿಂದಿಕ್ಕಿ ನಂಬರ್‌ ಒನ್‌ ಆದ “ ನ್ಯೂಸ್‌ 18”

news18 beats tv9 in TRP rating and becomes number one among kannada news channels

 

ಬೆಂಗಳೂರು, ಆ.೦೮,೨೦೨೫:  ರಾಜ್ಯದ ಮಾಧ್ಯಮ ಲೋಕದಲ್ಲಿ ಒಂದು ಹೊಸ ಸಂಚಲನ. ಸಾಮಾನ್ಯವಾಗಿ ಕರ್ನಾಟಕದ ಓದುಗರು ಮತ್ತು ವೀಕ್ಷಕರು ಸೋಮಾರಿಗಳು. ಅವರು ಯಾವುದಾದರೂ ಒಂದು ನ್ಯೂಸ್ ಬ್ರ್ಯಾಂಡಿಗೆ ಜೀವಮಾನವಿಡೀ ಅಂಟಿ ಕೊಂಡಿರುತ್ತಾರೆ.

ಅವರು ತಮ್ಮ ನಿಷ್ಠೆಯನ್ನು ಸುಲಭವಾಗಿ ಬದಲಿಸುವುದೇ ಇಲ್ಲ. ಪತ್ರಿಕೆಗಳಿಗೆ ಸಂಬಂಧಿಸಿದಂತೆ ಒಂದು ದಿಢೀರ್ ಕ್ರಾಂತಿ ಈ ಶತಮಾನದಲ್ಲಿ ಸಂಭವಿಸಿತ್ತು.ವಿಜಯ ಕರ್ನಾಟಕ, ಪ್ರಜಾವಾಣಿಯನ್ನು ಅಗ್ರ ಸ್ಥಾನದಿಂದ ಪಲ್ಲಟಗೊಳಿಸಿತ್ತು.

ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು de glamourise ಮಾಡಿತ್ತು. ಇದೀಗ news 18 ರೇಟಿಂಗ್ ನಲ್ಲಿ TV 9 ಅನ್ನು ಹಿಂದಕ್ಕೆ ಹಾಕಿ ಮುನ್ನುಗ್ಗಿದೆ. ಸುಮಾರು ಒಂದೂವರೆ ತಿಂಗಳ ಹಿಂದೆಯೇ ಅದು public tv ಯನ್ನು ಹಿಂದಕ್ಕೆ ತಳ್ಳಿತ್ತು.

ಆದರೆ news 18 ಸಂಸ್ಥೆ ಬ್ರಾಡ್ ಕಾಸ್ಟರ್ ಗಳ ಲ್ಯಾಂಡಿಂಗ್ ಪೇಜ್ ಗಳನ್ನು ಖರೀದಿಸಿ ಮಾರ್ಕೆಟಿಂಗ್ ಕಳ್ಳಾಟ ವಾಡುತ್ತಿದ್ದಾರೆ ಎನ್ನುವ ಅಪಪ್ರಚಾರ ಆರಂಭವಾಗಿತ್ತು.ಈಗ ವಿರೋಧಿಗಳ ಬಾಯಿ ಮುಚ್ಚಿಸುವಂತೆ ಟಿವಿ 9 ಅನ್ನೂ ಕೆಳಕ್ಕೆ ಬೀಳಿಸಿದೆ.

TV 18 ತಂಡಕ್ಕೆ ಅಭಿನಂದನೆಗಳು.ಇನ್ನೊಂದು ಮುಖ್ಯ ವಿಚಾರ. ನಮ್ಮ ಕೆಲವು ಮಾಧ್ಯಮಗಳು ನಾವು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎನ್ನುವ ಭ್ರಮೆಯಲ್ಲಿದ್ದವು. ಆದರೆ ಧರ್ಮಸ್ಥಳ SIT ರಚನೆ ವಿಷಯದಲ್ಲಿ ಅದು ಸುಳ್ಳಾಗಿದೆ.

SIT ರಚನೆಯಾಗಿದ್ದು social media ಮತ್ತು ಕೆಲವು national channel ಗಳ ಪ್ರಯತ್ನದಿಂದಾಗಿಯೇ. ಪ್ರಮುಖ ಮತ್ತು ವಿಶ್ವಾಸಾರ್ಹ ಮಾಧ್ಯಮಗಳು gag order ಗಳನ್ನು ತೆರವುಗೊಳಿಸಲು ಕೂಡ ಪ್ರಯತ್ನಿಸಲಿಲ್ಲ.  ಎಲ್ಲರೂ ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಾ ಕಾಲಹರಣ ಮಾಡಿದರು. ಆದರೆ ಅದನ್ನು ತೆರವುಗೊಳಿಸಿದ್ದು yutuberಗಳು ಮತ್ತು ಕೆಲವು ಸಂಘಟನೆಗಳು.

  • ರುದ್ರಪ್ಪ ಚೆನ್ನಬಸಪ್ಪ, ಹಿರಿಯ ಪತ್ರಕರ್ತರು, ಬೆಂಗಳೂರು.

KEY WORDS: news-18, beats, tv9, TRP rating, number one, kannada news channels

vtu

news18 beats tv9 in TRP rating and becomes number one among kannada news channels