Sunday, September 13, 2026

BDA Apartments

Home Front Page WWE ನೋಡಲು ಆಸಿಸ್ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಆಹ್ವಾನಿಸಿದ ಟ್ರಿಪಲ್ ಹೆಚ್

WWE ನೋಡಲು ಆಸಿಸ್ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಆಹ್ವಾನಿಸಿದ ಟ್ರಿಪಲ್ ಹೆಚ್

ಬೆಂಗಳೂರು, ಜನವರಿ 23, 2021 (www.justkannada.in): 

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾವನ್ನು ಡಬ್ಲ್ಯೂಡಬ್ಲ್ಯೂಇ ದಂತಕತೆ, ಅಮೆರಿಕಾದ ಟ್ರಿಪಲ್ ಹೆಚ್‌ ಮೆಚ್ಚಿದ್ದಾರೆ.

ಸರಣಿಯಲ್ಲಿ ಟೀಮ್ ಇಂಡಿಯಾದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘WWE ಸ್ಕ್ರಿಪ್ಟ್ ರೀತಿಯಲ್ಲೇ ಭಾರತ ಕಮ್‌ಬ್ಯಾಕ್‌ ಮಾಡಿತು, ಅದ್ಭುತ ರೀತಿಯಲ್ಲಿ ಟೆಸ್ಟ್ ಸರಣಿ ಗೆದ್ದಿತು. ಹೀಗಾಗಿ ಜನವರಿ 26ರಂದು ನಡೆಯೋ ಸೂಪರ್‌ಸ್ಟಾರ್ ಸ್ಪೆಕ್ಟ್ಯಾಕಲ್ ಪಂದ್ಯ ವೀಕ್ಷಿಸಲು ಭಾರತ ತಂಡವನ್ನು ಆಹ್ವಾನಿಸುತ್ತಿದ್ದೇನೆ ಎಂದಿದ್ದಾರೆ.

ಜನವರಿ 26ರ ವಿಶೇಷವಾಗಿ WWE ಭಾರತದ ಮೂಲದ ಸೂಪರ್​ ಸ್ಟಾರ್ ರೆಸ್ಲರ್​​ಗಳೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.