ಪ್ರಯಾಣಿಕರ ಗಮನಕ್ಕೆ: ನೈರುತ್ಯ ರೈಲ್ವೆ ಕೆಲ ಮಾರ್ಗಗಳಲ್ಲಿ ಬದಲಾವಣೆ

ಬೆಂಗಳೂರು, ಅಕ್ಟೋಬರ್ 17, 2020 (www.justkannada.in):  ನೈರುತ್ಯ ರೈಲ್ವೆಯ ಕೆಲ ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ದೌಂಡ – ಕುರ್ದುವಾಡಿ ಸೆಕ್ಷನ್ ಗಳಲ್ಲಿ , ಭಾಲ್ವಾನಿ – ವಾಶಿಂಬೆ ರೈಲ್ವೆ ನಿಲ್ದಾಣದ ನಡುವೆ ದ್ವಿಪಥ ಕಾಮಗಾರಿಯ ನಿಮಿತ್ತವಾಗಿ ಕೆಲವೊಂದು ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸೂಚನೆ ನೀಡಿದೆ.

ಅಕ್ಟೋಬರ್ 23ರಂದು ಆರಂಭವಾಗುವ ರೈಲು ಸಂಖ್ಯೆ 01017 ಲೋಕಮಾನ್ಯ ತಿಲಕ್ ಟರ್ಮಿನಸ್ – ಕಾರೈಕಲ್ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ಪುಣೆ, ಮಿರಜ್, ಹುಬ್ಬಳ್ಳಿ, ಯಶವಂತಪುರ, ಜೋಲಾರಪೆಟ್ಟೈ , ಕಾಟ್ಪಾಡಿ ವೆಲ್ಲೊರ ಕಂಟೋನ್ಮೆಂಟ್ ಮತ್ತು ವಿಲ್ಲುಪುರುಮ ಮಾರ್ಗವಾಗಿ ಚಲಿಸುತ್ತದೆ.

ಅಕ್ಟೋಬರ್ 18 ಹಾಗೂ 25 ರಂದು ಆರಂಭವಾಗುವ ರೈಲು ಸಂಖ್ಯೆ 01018 ಕಾರೈಕಲ್ – ಲೋಕಮಾನ್ಯ ತಿಲಕ್ ಟರ್ಮಿನಸ್ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ವಿಲ್ಲುಪುರಮ, ವೆಲ್ಲೋರ ಕಂಟೊನ್ಮೆಂಟ, ಕಾಟ್ಟಾಡಿ, ಜೋಲಾರಪೆಟ್ಟೈ, ಯಶವಂತಪುರ, ಹುಬ್ಬಳ್ಳಿ, ಮಿರಜ್ ಮತ್ತು ಪುಣೆ ಮಾರ್ಗವಾಗಿ ಚಲಿಸುತ್ತದೆ.