‘ಪಾರದರ್ಶಕ ತೆರಿಗೆ’ ವೇದಿಕೆಗೆ ಚಾಲನೆ: ತೆರಿಗೆ ಪಾವತಿ ವಿಧಾನ ಮತ್ತಷ್ಟು ಜನಸ್ನೇಹಿ ಎಂದ್ರು ಪ್ರಧಾನಿ ಮೋದಿ…

ನವದೆಹಲಿ,ಆ,13,2020(www.justkannada.in): ತೆರಿಗೆ ಪಾವತಿ ವಿಧಾನ ಮತ್ತಷ್ಟು ಸರಳಗೊಳಿಸಲಾಗುವುದು. ತೆರಿಗೆ ಪಾವತಿ ವಿಧಾನ ಮತ್ತಷ್ಟು ಜನಸ್ನೇಹಿಯಾಗಲಿದ್ದು, ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲು ಹೊಸ ವೇದಿಕೆ ತರಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.jk-logo-justkannada-logo

‘ಪಾರದರ್ಶಕ ತೆರಿಗೆ’ ವೇದಿಕೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪ್ರಾಮಾಣಿಕ ತೆರಿಗೆದಾರರನ್ನ ಗೌರವಿಸಲು ಯೋಜನೆ ಇದಾಗಿದೆ. ತೆರಿಗೆ ಪಾವತಿ ಸರಳಗೊಳಿಸುವುದು. ಮರು ಪಾವತಿ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲು ಹೊಸ ವೇದಿಕೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಹಲವು ಮಹತ್ತರ ಬದಲಾವಣೆಯಾಗುತ್ತಿದೆ. ತೆರಿಗೆ ಪಾವತಿ ವಿಧಾನದಲ್ಲೂ ಬದಲಾವಣೆಯಾಗುತ್ತಿದೆ. ತೆರಿಗೆ ವಿಧಾನದಲ್ಲಿನ ಬದಲಾವಣೆಗೆ ಹೊಂದುಕೊಳ್ಳಬೇಕು. ಪ್ರಾಮಾಣಿಕ ತೆರಿಗೆದಾರರನ್ನ ಗುರುತಿಸಿ ಸರ್ಕಾರ ಪ್ರೋತ್ಸಹಿಸುತ್ತೆ. ಒಂದು ಸುಧಾರಣೆ ಮತ್ತೊಂದು ಸುಧಾರಣೆಗೆ ಮಾರ್ಗವಾಗಬೇಕು. ದೇಶದಲ್ಲಿ ಇದ್ದ ಹಳೆಯ ಕಾನೂನುಗಳನ್ನ ರದ್ಧು ಮಾಢಿದ್ದೇವೆ. ಉದ್ಯಮ ಸರಳೀಕರಣ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಪ್ರಾಮಾಣಿಕ ತೆರಿಗೆದಾರರ ವಿಶ್ವಾಸ ಗಳಿಸಲು ಯತ್ನಸಲು ಇದು ಸಹಕಾರಿಯಾಗಲಿದೆ. ದೇಶದಲ್ಲಿ ನಡೆಯುತ್ತಿರುವ ಸುಧಾರಣೆ ಹೊಸ ಹಂತಕ್ಕೆ ತಲುಪಿದೆ.  ಪ್ರಮಾಣಿಕ ತೆರಿಗೆದಾರರ ಗೌರವಿಸುವ ಯಾತ್ರೆ ಆರಂಭವಾಗಿದ್ದು ತೆರಿಗೆ ಪಾವತಿ ವಿಧಾನ ಮತ್ತಷ್ಟು ಜನಸ್ನೇಹಿಯಾಗುತ್ತದೆ ಎಂದು ನುಡಿದರು.transparent-tax-code-platform-tax-payment-system-prime-minister-modi

ತೆರಿಗೆ ವಂಚನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಬೇಡಿ  ತೆರಿಗೆ ವಂಚನೆಯಿಂದ ಕೇವಲ ದೇಶಕ್ಕೆ ಮಾತ್ರವಲ್ಲ ನಿಮಗೆ ನೀವೂ ವಂಚನೆ ಮಾಡಿಕೊಂಡಂತೆ. ಯಾವುದೇ ಕಾರಣಕ್ಕೂ ಅಡ್ಡದಾರಿ ಹಿಡಿಯದಂತೆ ಪ್ರಧಾನಿ ಮೋದಿ ಸಲಹೆ ನೀಡಿದರು.

Key words: transparent tax code –platform-tax payment -system – Prime Minister- Modi.