ಬೆಳಗಾವಿ,ನವೆಂಬರ್,9,2022(www.justkannada.in): ಹಿಂದೂ ಪದದ ಬಗ್ಗೆ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನುಡಿದಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಹಿಂದೂ ಪದದ ಬಗ್ಗೆ ವಿವಾದ ಹುಟ್ಟು ಹಾಕಲು ನಾನು ಈ ಹೇಳಿಕೆ ನೀಡಿಲ್ಲ. ವಿಕಿಪೀಡಿಯಾದಲ್ಲಿ ಇದ್ದ ಅರ್ಥದ ಬಗ್ಗೆ ಹೇಳಿದ್ಧೇನೆ. ಪಕ್ಷಕ್ಕೆ ನನ್ನ ಹೇಳಿಕೆಗೆ ಸಂಬಂಧವಿಲ್ಲ. ಬೇರೆ ವೇದಿಕೆಯಲ್ಲಿ ಈ ವಿಚಾರದ ಬಗ್ಗೆ ನಾನು ಮಾತನಾಡಿದ್ದೇನೆ. ನಾನು ಹಿಂದೂ ಧರ್ಮವನ್ನು ಅಶ್ಲೀಲ ಎಂದು ಹೇಳಿಲ್ಲ. ಪರ್ಷಿಯನ್ ನಲ್ಲಿ ಹಿಂದೂ ಪದದ ಅರ್ಥ ಅಶ್ಲೀಲ ಅಂತಾ ಇದೆ. ಹಿಂದು ಪದದ ಬಗ್ಗೆ ಮಾತ್ರ ನಾನು ಮಾತನಾಡಿದ್ದೇನೆ ಎಂದರು.
ನಾನು ಯಾವುದೇ ಕಾರಣಕ್ಕ ಕ್ಷಮೆ ಕೇಳಲ್ಲ ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ. ಹಿಂದೂ ಪದದ ಅರ್ಥದ ಬಗ್ಗೆ ಚರ್ಚೆ ಆಗಬೇಕೆಂಬ ಉದ್ದೇಶ. ನನ್ನ ಹೇಳಿಕೆ ತಪ್ಪು ಅಂತಾಸಾಬೀತು ಮಾಡಲಿ. ರಾಜೀನಾಮೆ ನೀಡಲು ಸಿದ್ಧ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
Key words: still -stand –my- statement-kpcc-work president- Sathish Jarakiholi.