ಯಾರೂ ಓದದ ಜನಗಣತಿ ವರದಿ ತಿರಸ್ಕಾರಕ್ಕೆ ಆಗ್ರಹ..?

ಬೆಂಗಳೂರು,ಜುಲೈ,21,2023(www.justkannada.in): ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮೇ 20, ರಂದು ಪ್ರಮಾಣ ವಚನ ಸ್ವೀಕರಿಸಿ  ಕಾಂಗ್ರೆಸ್ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ತರಲು  ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ನೇತ್ರತ್ವದಲ್ಲಿ ಹಗಲಿರುಳು ಶ್ರಮಿಸಿ, ಬಿಜೆಪಿಯನ್ನು ಸೋಲಿಸಿದ್ದಾರೆ. ಬಿಜೆಪಿ ಮಾತ್ರ ವಲ್ಲ. ಈ ಬಾರಿ ಕಪ್ ನಮ್ಮದೆ, 123 ಸೀಟು ಗ್ಯಾರಂಟಿ ಎಂದು ಪ್ರಚಾರ ಮಾಡಿದ ಜೆಡಿಎಸ್ ಕೂಡ ಕಾಂಗ್ರೆಸ್ ಗ್ಯಾರಂಟಿ ಮುಂದೆ ಸೋತು ಸೊರಗಿದೆ.

ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿ ಎರಡು ತಿಂಗಳಾಗಿದೆ. ಇಷ್ಟು ಅಲ್ಪ ಅವಧಿಯಲ್ಲೇ ಸರ್ಕಾರದ ವಿರುಧ್ದ ಆರೋಪಗಳ ಸುರಿಮಳೆಯನ್ನೆ ವಿರೋಧ ಪಕ್ಷಗಳು, ಅದರಲ್ಲೂ ಜೆಡಿಎಸ್ ಸುರಿಸಿದೆ.

ಮತ್ತೊಂದು ವಿಷಯ ಪ್ರಮುಖವಾಗಿ ಚರ್ಚೆಗೆ  ಗ್ರಾಸವಾಗಿದೆ. ಅದು ಹೆಚ್ ಕಾಂತರಾಜರವರ ಅಧ್ಯಕ್ಷತೆಯಲ್ಲಿ 2013-2018 ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಹಾಗೂ ಜಾತಿ ಗಣತಿ. ಜಾತಿ ಗಣತಿಯ ಕಾರ್ಯ ಅಪೂರ್ಣವಾಗಿದ್ದ ಕಾರಣ, ಸಿದ್ದರಾಮಯ್ಯ ಸರ್ಕಾರಕ್ಜೆ ಕಾಂತರಾಜ ಆಯೋಗ, ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ.

2018 ರಲ್ಲಿ ಕಾಂಗ್ರೆಸ್ ಪಕ್ಷ ಸೋತು, ಜೆಡಿಎಸ್ ಜೊತೆ ಒಲ್ಲದ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚಿಸಿತು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ, ಈ ವರದಿಯನ್ನು ಸ್ವೀಕರಿಸಲು ಒಪ್ಪಲಿಲ್ಲ. ಅವರ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಖಾತೆ ಸಚಿವರಾಗಿದ್ದ ಪುಟ್ಟರಂಗಶೆಟ್ಟರಿಗೆ ಆ ವರದಿಯ ಬಗ್ಗೆ ಮಾತಾಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದರಂತೆ.

ಕುಮಾರಸ್ವಾಮಿಯವರ ಸರ್ಕಾರ ಪತನವಾದ ನಂತರ ಯಡಿಯೂರಪ್ಪ ಅಧಿಕಾರದ ಗದ್ದುಗೆ ಏರಿದರು. ಅವರೂ ಕಾಂತರಾಜ ವರದಿ ಅವೈಜ್ಞಾನಿಕ ಎಂದರೆ ಹೊರತು, ಅದನ್ನು ಸ್ವೀಕರಿಸಲಿಲ್ಲ. ಅಸಲಿಗೆ ಇಂದಿಗೂ ಕಾಂತರಾಜ ಆಯೋಗದ ವರದಿಯನ್ನು ಅಧಿಕೃತವಾಗಿ ಸರ್ಕಾರ ಸ್ವೀಕರಿಸಿಲ್ಲ. ಇದರ ಅರ್ಥ ಯಾರೂ ಸಹ, ಸರ್ಕಾರದ ಮಟ್ಟದಲ್ಲಿ ಈ ವರದಿಯನ್ನು ಇದುವರೆವಿಗೂ ಓದಿಲ್ಲ. ಅದರ ಕಡೆ ಕಣ್ಣಾಡಿಸಿಲ್ಕಾ. ಆದರೊ ಬಹುತೇಕ ರಾಜಕಾರಣಿಗಳು ಅದು ಅವೈಜ್ಞಾನಿಕ ವರದಿ ಎಂದು ಕನವರಿಸುತ್ತಿದ್ದಾರೆ.

ಯಾರೂ ಕಣ್ಣೆತ್ತಿಯೂ ನೋಡದ ವರದಿಯ ವಿವರಗಳು ತಿಳಿದ್ದದ್ದು ಹೇಗೆ. ಅಷ್ಟೊಂದು ದಿವ್ಯ ಶಕ್ತಿವಂತರೆ ನಮ್ಮ ರಾಜಕಾಸರಣಿಗಳು?

ಸರ್ಕಾರ ಮೊದಲು ಆ ವರದಿಯನ್ನು ಸ್ವೀಕರಿಸಿ, ಅದನ್ನು ಅದ್ಯಯನ ಮಾಡಿದ ನಂತರ. ಅದು ವೈಜ್ನಾನಿಕವೋ ಅವೈಜ್ಞಾನಿಕವೋ ನಿರ್ಧರಿಸಲಿ. ಬೇಡವಾದರೆ ತಿರಸ್ಕರಿಸಲಿ. ಆದರೆ ವರದಿಯನ್ನು ಸ್ವೀಕರಿಸದೆ, ಅದರ ವಿವರಗಳನ್ನು ಪರಿಶೀಲಿಸದೆ, ಅದು ಸ್ವೀಕಾರ ಯೋಗ್ಯವಲ್ಲ ಎಂಬ ನಿರ್ಣಯಕ್ಕೆ ಬರುವುದು ಎಷ್ಟು ಸಮಂಜಸ.an

 

 

ಏತನ್ಮಧ್ಯೆ, ಬ್ರಾಹ್ಮಣರು, ಒಕ್ಕಲಿಗ ಸಮುದಾಯದ ನಾಯಕರು ಕಾಂತರಾಜ ಆಯೋಗದ ವರದಿ ತಿರಸ್ಕರಿಸಿ ಎಂಬ ಬೇಡಿಕೆ ಮಂದಿಟ್ಟಿದ್ದಾರೆ. ಇವರುಗಳು ಈ ವರದಿಯನ್ನು ಪರಾಂಬರಿಸಿದ್ಸಾರೆಯೇ, ಹಾಗಿದ್ದರೆ, ಅವರಿಗೆ ಈ ವರದಿಯ ಪ್ರತಿಯನ್ನು ನೀಡಿದವರು ಯಾರು?

ಅಂತೂ ನೂರಾರು ಕೋಟಿ ವ್ಯಯಿಸಿ ಮಾಡಿದ ವರದಿಯೊಂದನ್ನು ಸ್ವೀಕರಿಸದೆ, ಓದದೆ ಮೂಲೆಗೆ ಸೇರಿಸುವ ಹುನ್ನಾರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಈ ವರದಿಯನ್ನು ಸ್ವೀಕರಿಸುವುದೇ?

M.SIDDARAJU, SENIOR JOURNALIST

 

ಎಂ.ಸಿದ್ಧರಾಜು

ಹಿರಿಯ ಪತ್ರಕರ್ತರು

 ಬೆಂಗಳೂರು

 

Key words: rejection – census- report – no one- reads-CM siddaramaiah