ಮೈಸೂರು,ಜನವರಿ,19,2021(www.justkannada.in): ರೈತರ ಆತ್ಮಹತ್ಯೆಗೆ ಕಾರಣ ಅವರ ವೀಕ್ ನೆಸ್ ಮೈಂಡ್ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಬಿ.ಸಿ ಪಾಟೀಲ್, ಕೆಲ ಸಂದರ್ಭದಲ್ಲಿ ರೈತರ ಮೈಂಡ್ ವೀಕ್ ಆದಾಗ ಆತ್ಮಹತ್ಯೆ ನಿರ್ಧಾರ ಮಾಡುತ್ತಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಕೇವಲ ರೈತರಷ್ಟೆ ಆತ್ಮಹತ್ಯೆ ಮಾಡಿಕೊಳ್ಳೊದಿಲ್ಲ. ಉದ್ಯಮಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಲ್ಲವನ್ನು ರೈತ ಆತ್ಮಹತ್ಯೆ ಅಂತ ಹೇಳಲು ಆಗಲ್ಲ ಎಂದರು.
ರೈತರು ವೀಕ್ನೆಸ್ ಆಫ್ ಮೈಂಡ್ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾವುದೋ ಕಾರಣದಲ್ಲಿ ಯಾವುದೋ ಒಂದು ಟೈಂ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರ ಆತ್ಮಹತ್ಯೆ ಆಗಬಾರದು ಅಂತಾನೆ ಇಷ್ಟೇಲ್ಲ ಕಾರ್ಯಕ್ರಮ ಮಾಡ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿದ್ರೆ ಸಾಂತ್ವನ ಹೇಳಿದ್ರೆ ಆತ್ಮಹತ್ಯೆ ನಿಲ್ಲೋಲ್ಲ. ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು. ಅದಕ್ಕಾಗಿ ಇಂತಹ ಕಾರ್ಯಕ್ರಮ ರೂಪಿಸಿ ತರಬೇತಿ ನೀಡುತ್ತಿದ್ದೇವೆ ಎಂದರು.
ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆಯಡಿ 490 ಕೋಟಿ ರೂ ನೀಡಿದ್ದಾರೆ. ಆಹಾರ ಸಂಸ್ಕರಣ ಘಟಕ್ಕೂ ಈ ಯೋಜನೆಯಡಿ ಅನುದಾನ ನೀಡಿದ್ದಾರೆ. ಒನ್ ಡಿಸ್ಟ್ರಿಕ್ಟ್ ಒಂದು ಪ್ರೊಡೆಕ್ಟ್ ಯೋಜನೆಯನ್ನು ಕಾರ್ಯರೂಪಕ್ಮೆ ತರಲಾಗುತ್ತಿದೆ. ಸಿಎಫ್ ಟಿ ಆರ್ ಐ ಜೊತೆ ಒಪ್ಪಂದ ಮಾಡಿಕೊಂಡು. 500 ಜನ ರೈತರಿಗೆ ತರಬೇತಿ ನೀಡಲಾಗುತ್ತಿದೆ. ರೈತರನ್ನು ಉದ್ಯಮಿಯಾಗಿ ಮಾಡೋದು ಈ ಕಾರ್ಯಕ್ರಮದ ಉದ್ದೇಶ. ರೈತ ಬೆಳೆದ ಬೆಳೆ ಸಂಸ್ಕರಣೆ ಮಾಡಿ, ಪ್ಯಾಕ್ ಮಾಡಿ ನೆರವಾಗಿ ರೈತರು ಮಾರಾಟ ಮಾಡಬಹುದಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇದೆ. ಸಿಎಫ್ ಟಿ ಆರ್ ಐ ನಿರ್ದೇಶಕರ ಜೊತೆ ಚರ್ಚೆ ಮಾಡಿದ್ದೇನೆ. ಎರಡು ದಿನಗಳ ಕಾಲ ಮಾರ್ಕೆಟಿಂಗ್ ತರಬೇತಿ ನೀಡುವಂತೆ ತಿಳಿಸಲಾಗಿದೆ. ಈ ಮೂಲಕ ರೈತರನ್ನ ಉದ್ಯಮಿಗಳನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಬಿ.ಸಿ ಪಾಟೀಲ್ ತಿಳಿಸಿದರು.
Key words: reason – farmers- suicide – their Weak Ness- Mind – Minister- BC Patil.