ಬೆಳಗಾವಿ,ಡಿಸೆಂಬರ್,16,2020(www.justkannada.in): ಕನ್ನಡ ಸೇವೆ ಸಲ್ಲಿಸದ ವಿಮಾನಯಾನ ಸಂಸ್ಥೆಗಳ ವಿರುದ್ದ ಐಎಎಸ್ ಅಧಿಕಾರಿ ಎಲ್.ಕೆ ಅತೀಕ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಇಂಡಿಗೋ ಹಾಗೂ ಇತರೇ ವಿಮಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯೆ ಏನು…? ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಮತ್ತೊಂದು ಟ್ವಿಟ್ಟರ್ ನಲ್ಲಿ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಿಡಿಕಾರಿರುವ ಐಎಎಸ್ ಅಧಿಕಾರಿ ಎಲ್.ಕೆ ಅತೀಕ್ ಅವರು, ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿ ಇಂಗ್ಲೀಷ್, ಹಿಂದಿ, ಮಳಯಾಳಂ ಭಾಷೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಬ್ರಿಟಿಷ್ ಏರ್ವೇಸ್ ಎಮಿರೇಟ್ಸ್, ಸಿಂಗಾಪುರ್ ಏರ್ ಲೈನ್ಸ್ ನಿಂದ ಕನ್ನಡ ಸೇವೆ ನೀಡುತ್ತಿವೆ. ಆದರೆ ಇಂಡಿಗೋದಂತಹ ವಿಮಾನ ಸಂಸ್ಥೆಗಳಿಗೆ ಕನ್ನಡ ಸೇವೆ ನೀಡಲು ತೊಂದರೇ ಏನು..? ಕನ್ನಡ ಮಾತನಾಡುವ ಸಿಬ್ಬಂದಿ ನೇಮಿಸಿಕೊಳ್ಳಲು ಕಷ್ಟವೇನು ಎಂದು ಕಿಡಿಕಾರಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಎಲ್.ಕೆ ಅತೀಕ್ ಅವರು ಬೆಳಗಾವಿ ಜಿಲ್ಲೆ ಮತದಾರರ ಪಟ್ಟಿಯ ವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು ಬೆಂಗಳೂರಿನಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದು ಈ ವೇಳೆ ಕನ್ನಡ ಸೇವೆ ನೀಡದೆ ಇದ್ದುದ್ದರಿಂದ ಐಎಎಸ್ ಅಧಿಕಾರಿ ಎಲ್.ಲೆ ಅತೀಕ್ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Key words: IAS officer –athik-outrage- against -airlines -not serving – Kannada.