.ಮೈಸೂರು8,ಜೂ,25,2019: ನಮ್ಮ ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರ. ಭಾರತದ ಸಂವಿಧಾನವೇ ನಮ್ಮ ದೇಶದ ಮೂಲಗ್ರಂಥ, ಚುನಾವಣಾ ಆಯೋಗ ಸ಼ಂವಿಧಾನದ ಒಂದು ಭಾಗ.ಚುನಾವಣಾ ಆಯೋಗದಲ್ಲಿ ಇವಿಎಂ ಉಲ್ಲೇಖವೇ ಇಲ್ಲ ಕೇವಲ ಮತಪತ್ರ ಚುನಾವಣಾ ಬಗ್ಗೆಯೇ ಉಲ್ಲೇಖವಿರುವುದು.ಈ ಸಂಧರ್ಭದಲ್ಲಿ ಪ್ರಜಾಪ್ರಭುತ್ವ,ಜನತಂತ್ರ ವ್ಯವಸ್ಥೆಯನ್ನು ದಿಕ್ಕರಿಸಿ ಜನವಿರೋಧಿ ಪೆಡಂಬೂತ ಇವಿಎಂ ಬಳಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸುತ್ತಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಖಂಡಿಸಿ ರಾಷ್ಟ್ರದ ಗೌರವಾನ್ವಿತ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ರವರಿಗೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ನೇತೃತ್ವದಲ್ಲಿ ಮಹಾನಗರಪಾಲಿಕೆ ಆವರಣದ ಅಂಚೆಪೆಟ್ಟಿಗೆಯಲ್ಲಿ ಮತಪತ್ರ ಚಳುವಳಿಯ ಅಂಚೆ ಕಾರ್ಡ್ ಹಾಕುವ ಮೂಲಕ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್,ನಗರಾಧ್ಯಕ್ಷ ಆರ್ ಮೂರ್ತಿ,ಪ್ರಭಾರ ಅಧ್ಯಕ್ಷೆ ಲತಾ ಮೋಹನ್,ಆಡಳಿತ ಪಕ್ಷದ ನಾಯಕಿ ಶಾಂತಕುಮಾರಿ,ಮಾಜಿ ಮಹಾಪೌರರಾದ ಮೋದಾಮಣಿ,ಪುಷ್ಪಲತಾ ಚಿಕ್ಕಣ,ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
Key words: Ballot- demanding- ballot paper- use – election- Mysore