ನವದೆಹಲಿ,ಮೇ,17,2021(www.justkannada.in): ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿರುವ 2-ಡಿಜಿ ಕೊರೋನಾ ಔಷಧಿಯನ್ನ ಇಂದು ಬಿಡುಗಡೆ ಮಾಡಲಾಗಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ 2-ಡಿಜಿ ಔಷಧಿಯನ್ನು ಇಂದು ಸೋಂಕಿತರ ತುರ್ತು ಚಿಕಿತ್ಸೆಗಾಗಿ ಬಳಕೆ ಮಾಡಲು ಬಿಡುಗಡೆ ಮಾಡಿದ್ದಾರೆ. ಮೊದಲ ಹಂತದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯ 10,000 ಡೋಸ್ಗಳನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು 2-ಡಿಜಿ ಔಷಧಿಯನ್ನು ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರಿಗೆ ಹಸ್ತಾಂತರಿಸಿದರು.
Key words: 2-DG drug –release- developed – DRDO