ಟೊಮ್ಯಾಟೊ ಬೆಲೆ ದಿಢೀರ್ ಕುಸಿತ: ಗ್ರಾಹಕರಿಗೆ ಖುಷಿ, ರೈತರಿಗೆ ಬೇಸರ

ಬೆಂಗಳೂರು, ನವೆಂಬರ್ 2021 (www.justkannada.in): ಕಳೆದ ಹದಿನೈದು ದಿನಗಳಿಂದ ಏರುಮುಖಿಯಾಗಿದ್ದ ಟೊಮ್ಯಾಟೊ ಬೆಲೆ ದಿಢೀರ್ ಕುಸಿತವಾಗಿದೆ.

ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಟೊಮ್ಯಾಟೊ ಸರಬರಾಜು ಹೆಚ್ಚಿದ್ದು, ಬೆಂಗಳೂರಿನಲ್ಲಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದೆ.

ಕೆಲ ದಿನಗಳ ಹಿಂದೆ 15 ಕೆಜಿ ಟೊಮ್ಯಾಟೊ ಬಾಕ್ಸ್‌ನ ಬೆಲೆ 3100 ರೂಪಾಯಿ ಇದ್ದುದು ಇದೀಗ ದಿಢೀರನೇ 400-600 ರೂಪಾಯಿಗೆ ಕುಸಿದಿದೆ.

ಇಂಧನ ಬೆಲೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ಚಿಂತೆ ಹೆಚ್ಚಿಸಿದ್ದ ಟೊಮ್ಯಾಟೊ ಬೆಲೆ, ಇದೀಗ ಇಳಿದಿರುವುದು ಗ್ರಾಹಕರಿಗೆ ಸಂತಸ ತಂದಿದೆ. ಬೆಲೆ ಇಳಿಕೆ ರೈತರನ್ನು ಆತಂಕಕ್ಕೀಡು ಮಾಡಿದೆ.