ಟೋಕಿಯೊ ಒಲಿಂಪಿಕ್ಸ್: ಕ್ರೀಡಾಪಟುಗಳಿಗೆ ಮೋದಿ ಶುಭ ಹಾರೈಕೆ

ಬೆಂಗಳೂರು, ಜೂನ್ 24, 2021 (www.justkannada.in): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ದೇಶದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

ಒಲಿಂಪಿಕ್‌ ದಿನದ ಅಂಗವಾಗಿ ಜತೆಗೆ ಕೆಲವೇ ದಿನಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ ಆರಂಭವಾಗಲಿದೆ. ಹೀಗಾಗಿ ಮೋದಿ ಭಾರತ ಭಾರತದ ಕ್ರೀಡಾಳುಗಳಿಗೆ ಶುಭ ಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ತಂದಿತ್ತ ಮಾಜಿ ಕ್ರೀಡಾಪಟುಗಳಿಗೂ ಮೋದಿ ಗೌರವ ಸಲ್ಲಿಸಿದ್ದಾರೆ.

ಕ್ರೀಡೆಗೆ ಸಲ್ಲಿಸಿದ ಕೊಡುಗೆಯಿಂದ, ಇತರರಿಗೆ ತುಂಬಿದ ಸ್ಫೂರ್ತಿಯಿಂದ ದೇಶವೇ ಹೆಮ್ಮೆಪಟ್ಟಿದೆ’ ಎಂದು ಮೋದಿ ಗುಣಗಾನ ಮಾಡಿದ್ದಾರೆ.