Thursday, August 27, 2026

BDA Apartments

Home Front Page ಟೋಕಿಯೋ ಒಲಂಪಿಕ್ಸ್: ಕಂಚಿನ ಪದಕ ಗೆದ್ಧ ಭಾರತೀಯ ಹಾಕಿ ತಂಡ.

ಟೋಕಿಯೋ ಒಲಂಪಿಕ್ಸ್: ಕಂಚಿನ ಪದಕ ಗೆದ್ಧ ಭಾರತೀಯ ಹಾಕಿ ತಂಡ.

ಟೋಕಿಯೋ,ಆಗಸ್ಟ್,5,2021(www.justkannada.in): 41 ವರ್ಷಗಳ ನಂತರ, ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ಭೂಪಟದಲ್ಲಿ ಭಾರತೀಯ ಘನತೆ ಹೆಚ್ಚಿಸಿದೆ.

 

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ 5-4ರಿಂದ ಗೆಲ್ಲುವ ಮೂಲಕ ಕಂಚಿನ ಪದಕ ಗೆದ್ದಿದೆ. ಭಾರತೀಯ ಹಾಕಿ ತಂಡ 1980 ನಂತರ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದೆ.

 

ಸೆಮಿಫೈನಲ್ ನಲ್ಲಿ ಭಾರತ ತಂಡ ಬೆಲ್ಜಿಯಂ ಎದುರು ಸೋತಿತ್ತು. ಇದರ ನಂತರ ಕಂಚಿಗಾಗಿ ಹೋರಾಟ ನಡೆಸಿತ್ತು. ಆರಂಭದಲ್ಲಿ ಭಾರತ ತಂಡವು ಜರ್ಮನಿಯ ವಿರುದ್ಧ 1-3 ರಿಂದ ಹಿಂದುಳಿದಿತ್ತು, ಆದರೆ ಏಳು ನಿಮಿಷಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಭಾರತೀಯ ಆಟಗಾರರು ಪಂದ್ಯದ ದಿಕ್ಕನ್ನು ತಿರುಗಿಸಿದರು.

ಇಡೀ ದೇಶವೇ ಗೆಲುವನ್ನು ಸಂಭ್ರಮಿಸುತ್ತಿದೆ.

 

Key words: Tokyo Olympics- Bronze medal-winning -Indian hockey -team.