ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 18ನೇ ವಾರ್ಷಿಕ ಘಟಿಕೋತ್ಸವ

ಮೈಸೂರು, ಜುಲೈ 02, 2023 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 18ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದೆ. ಇದಕ್ಕಾಗಿ ಮುಕ್ತ ವಿವಿ ಘಟಿಕೋತ್ಸವ ಭವನ ಸಜ್ಜಾಗಿದೆ.

ಸ್ನಾತಕೋತ್ತರದಲ್ಲಿ 7057 ವಿದ್ಯಾರ್ಥಿಗಳು ತೇರ್ಗಡೆಯಾದರೇ ಸ್ನಾತಕ ಪದವಿಯಲ್ಲಿ 1664 ಪಾಸ್ ಆಗಿದ್ದಾರೆ ಎಲ್ಲರಿಗೂ ಇಂದು ಪದವಿ ಪ್ರದಾನ ಮಾಡಲಾಗುತ್ತದೆ.

ಇದರ ಜತೆಗೆ ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮರಿಗೆ, ಶಿಕ್ಷಣತಜ್ಞರಾದ ಎನ್.ರಾಮಚಂದ್ರಯ್ಯ, ವೆಂಕಟಲಕ್ಷ್ಮಿ ನರಸಿಂಹರಾಜುಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

44 ಚಿನ್ನದ ಪದಕಗಳು, 27 ನಗದು ಬಹುಮಾನಗಳನ್ನು ವಿತರಣೆ ಮಾಡಲಾಗುತ್ತದೆ. ವಿಶ್ವವಿದ್ಯಾಲಯದ ವಿವಿಧ ವಿಷಗಳಲ್ಲಿ ಒಟ್ಟು 8,722 ಪದವಿ ಪೂರೈಸಿದವರಿಗೆ ಪದವಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪೈಕಿ 5,241 ಮಹಿಳೆಯರು ಹಾಗೂ 3,481 ಪುರುಷರು ಪದವಿ ಸ್ವೀಕರಿಸಲಿದ್ದಾರೆ.