Sunday, August 23, 2026

BDA Apartments

Home Front Page ಇಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ 102 ನೇ ಆವೃತ್ತಿ

ಇಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ 102 ನೇ ಆವೃತ್ತಿ

ಬೆಂಗಳೂರು, ಜೂನ್ 18, 2023 (www.justkannada.in): ಇಂದು ಪ್ರಧಾನಿ ನರೇಂದ್ರ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 102 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಮೋದಿ ಅಭಿಮಾನಿಗಳು ಅವರ ಮಾತು ಕೇಳಲು ಕಾತರರಾಗಿದ್ದಾರೆ.

ಪಿಎಂ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮವು ಇತ್ತೀಚೆಗೆ ತನ್ನ 100 ನೇ ಸಂಚಿಕೆಯನ್ನು ಪೂರ್ಣಗೊಳಿಸಿತು ಇದು ಏಪ್ರಿಲ್ 26 ರಂದು ದೇಶಾದ್ಯಂತ ನೇರ ಪ್ರಸಾರವಾಗಿತ್ತು.

ಈ ಕಾರ್ಯಕ್ರಮವನ್ನು ದೂರದರ್ಶನ ದೇಶಾದ್ಯಂತ ರಾಜಭವನಗಳಲ್ಲಿ ನೇರ ಪ್ರಸಾರ ಮಾಡಿದೆ. ಅದೇ ದಿನ ನೂತನ ಸಂಸತ್ ಭವನವನ್ನೂ ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು.