Saturday, August 22, 2026

BDA Apartments

Home Cinema ಇಂದು ಎಸ್’ಪಿಬಿ ಜನ್ಮದಿನ: ಸೋಷಿಯಲ್ ಮೀಡಿಯಾದಲ್ಲಿ ಸ್ಮರಿಸಿದ ಅಭಿಮಾನಿಗಳು

ಇಂದು ಎಸ್’ಪಿಬಿ ಜನ್ಮದಿನ: ಸೋಷಿಯಲ್ ಮೀಡಿಯಾದಲ್ಲಿ ಸ್ಮರಿಸಿದ ಅಭಿಮಾನಿಗಳು

ಬೆಂಗಳೂರು, ಜೂನ್ 04, 2021 (www.justkannada.in): ಇಂದು ಎಸ್ ಪಿ ಬಾಲಸುಬ್ರಮಣ್ಯಂಗೆ ಅವರ ಜನ್ಮ ದಿನ. ಅವರಿಂದು ಇದ್ದಿದ್ದರೆ 75ನೇ ವಸಂತಕ್ಕೆ ಕಾಲಿಡುತ್ತಿದ್ದರು.

ಕೊರೋನಾಗೆ ಬಲಿಯಾದ ಎಸ್ಪಿಬಿ ಸವಿ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಸಂಗೀತ ಕ್ಷೇತ್ರದ ಕಲಾವಿದರು ಎಸ್ ಪಿಬಿಗೆ ಹಾಡಿನ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಅವರ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಎಸ್ ಪಿಬಿ ಮತ್ತೆ ಹುಟ್ಟಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.