ಇಂದು ರೆಬೆಲ್’ಸ್ಟಾರ್ ಅಂಬರೀಶ್ 70ನೇ ಹುಟ್ಟುಹಬ್ಬ

ಬೆಂಗಳೂರು, ಮೇ 29, 2022 (www.justkannada.in): ಇಂದು ಕನ್ನಡ ಚಿತ್ರರಂಗದ ರೆಬೆಲ್‌ಸ್ಟಾರ್‌ ನಟ ಅಂಬರೀಶ್‌ ಅವರ 70ನೇ ಹುಟ್ಟುಹಬ್ಬ.

ನೆಚ್ಚಿನ ಅಂಬಿ ಅಗಲಿದ್ದರೂ ಅವರ ಅನುಪಸ್ಥಿತಿಯಲ್ಲೂ ಅಭಿಮಾನಿಗಳು ಅಂಬರೀಶ್‌ ಜನ್ಮದಿನವನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಅಂಬಿ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಅಂಬರೀಶ್‌ ಅಗಲಿಕೆಯ ನಂತರ ಅವರ ಜನ್ಮದಿನವನ್ನು ಸಾಮಾಜಿಕ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತ ಬಂದಿದ್ದಾರೆ.

ಜನ್ಮದಿನದ ಪ್ರಯುಕ್ತ ಅಂಬರೀಶ್‌ ಸಮಾಧಿ ಸ್ಥಳದಲ್ಲಿ ಮೊದಲಿಗೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಗುತ್ತಿದ್ದು, ಅದಾದ ಬಳಿಕ ಅನ್ನದಾನ, ರಕ್ತದಾನ, ನೇತ್ರದಾನ ಮುಂತಾದ ಸಾಮಾಜಿಕ ಕಾರ್ಯಗಳನ್ನು ನಡೆಸಲು ಅಭಿಮಾನಿಗಳು ಯೋಜನೆ ಹಾಕಿಕೊಂಡಿದ್ದಾರೆ.