Sunday, August 23, 2026

BDA Apartments

Home Front Page ಇಂದೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ.

ಇಂದೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ.

ನವದೆಹಲಿ,ಅಕ್ಟೋಬರ್,9,2023(www.justkannada.in): ಇಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ನಿಗದಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಐದು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಇಂದು ಭಾರತೀಯ ಚುನಾವಣಾ ಆಯೋಗವು ಘೋಷಣೆ ಮಾಡಲಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಈ ವೇಳೆ ಮತದಾನದ ದಿನಾಂಕ, ಹಂತಗಳ ಸಂಖ್ಯೆ ಮತ್ತು ನಾಮಪತ್ರಗಳನ್ನು ಸಲ್ಲಿಸುವ ಮತ್ತು ಹಿಂತೆಗೆದುಕೊಳ್ಳುವ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ಹೇಳಿದೆ.

ಈ ಐದು ರಾಜ್ಯಗಳಲ್ಲಿನ ಶಾಸಕಾಂಗ ಸಭೆಗಳ ಅವಧಿಯು ಡಿಸೆಂಬರ್ 2023 ಮತ್ತು ಜನವರಿ 2024 ರ ನಡುವೆ ಮುಕ್ತಾಯಗೊಳ್ಳಲಿದೆ.

Key words: Today- announcement–five -state -assembly -elections.