ಬಾರಿ ಮಳೆಯಿಂದಾಗಿ ತಿವಾರೆ ಅಣೆಕಟ್ಟು ಒಡೆದು ನುಗ್ಗಿದ ನೀರು: ಆರು ಮಂದಿ ಸಾವು…

ಮಹಾರಾಷ್ಟ್ರ,, ಜು.3,2019(www.justkannada.in):  ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ  ಭಾರೀ ಮಳೆ ಸುರಿಯುತ್ತಿರುವುದುದಿರಂದಾಗಿ ತಿವಾರೆ ಅಣೆಕಟ್ಟು ಒಡೆದು  ನೀರು ನುಗ್ಗಿದ್ದು ಈ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಬಾರಿ ಮಳೆಯಿಂದಾಗಿ ರತ್ನಗಿರಿ ಜಿಲ್ಲೆ ತ ತಿವಾರೆ ಅಣೆಕಟ್ಟು ಒಡೆದು ನೀರು ನುಗ್ಗಿದೆ. ಈ ವೇಳೆ 6 ಮಂದಿ ಸಾವನ್ನಪ್ಪಿದ್ದು 20 ಮಂದಿ ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರ ರಾತ್ರಿ 10ರ ಸುಮಾರಿಗೆ ಅಣೆಕಟ್ಟು ಕುಸಿದುಬಿದ್ದಿರುವ ಘಟನೆ ನಡೆದಿತ್ತು.

ತಿವಾರೆ ಅಣೆಕಟ್ಟಿನ ಕೆಳ ಭಾಗದಲ್ಲಿರುವ ಕನಿಷ್ಠ ಏಳು ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನಾಪತ್ತೆಯಾಗಿರುವವರನ್ನ ಪತ್ತೆ ಹಚ್ಚಲು ಸ್ಥಳೀಯ ಪೊಲೀಸ್, ಜಿಲ್ಲಾ ವಿಪತ್ತುನಿರ್ವಹಣಾ ತಂಡ, ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Key words: Tiware Dam- breaks –rains-Six- deaths-maharashtra