ತಿರುಪತಿ ಇನ್ನು ಮುಂದೆ ಶ್ರೀ ಬಾಲಾಜಿ ಜಿಲ್ಲೆ

ಬೆಂಗಳೂರು, ಜನವರಿ 28, 2021 (www.justkannada.in): ತಿರುಪತಿ ಜಿಲ್ಲೆಗೆ ಮರುನಾಮಕರಣ ಮಾಡಲು ಆಂಧ್ರ ಪ್ರದೇಶ ತೀರ್ಮಾನಿಸಿದೆ.

ಹೌದು. ತಿರುಪತಿ ಇನ್ನು ಜಿಲ್ಲಾ ಕೇಂದ್ರವಾಗಲಿದೆ.  ಇದಕ್ಕೆ ಶ್ರೀ ಬಾಲಾಜಿ ಜಿಲ್ಲೆ ಎಂದು ಹೆಸರಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಮಾಡುವುದಕ್ಕೆ ಜನರಲ್ಲಿ ಖುಷಿ ಮನೆ ಮಾಡಿದೆ.

ಈ ನಡುಯವೆ ಬಾಲಾಜಿ ಜಿಲ್ಲೆ ಎಂದು ನಾಮಕರಣ ಮಾಡುವುದಕ್ಕೆ ಕೆಲವರು ಅತೃಪ್ತಿ ಸೂಚಿಸಿದ್ದಾರೆ.

ಆದರೆ ಸರಕಾರ ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿರುವುದರಿಂದ ತಿರುಪತಿ ಇನ್ನು ಮುಂದೆ ಬಾಲಾಜಿ ಜಿಲ್ಲೆಯಾಗಲಿದೆ.