ಟಿಪ್ಪು ನಿಜ ಕನಸುಗಳು ಪುಸ್ತಕ ನನ್ನ ಕೈ ಸೇರಿದೆ: ಮೊಕದ್ದಮೆ ದಾಖಲಿಸುತ್ತೇವೆ- ಶಾಸಕ ತನ್ವೀರ್ ಸೇಠ್.

ಮೈಸೂರು,ನವೆಂಬರ್,14,2022(www.justkannada.in):  ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ನಿನ್ನೆ ಬಿಡುಗಡೆಯಾದ ಟಿಪ್ಪು ನಿಜ ಕನಸುಗಳು  ಪುಸ್ತಕ ನನ್ನ ಕೈ ಸೇರಿದೆ. ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸುತ್ತೇವೆ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್, ನಾಟಕ ಪ್ರದರ್ಶನ ನ.20ರಿಂದ ಪ್ರಾರಂಭವಾಗಲಿದೆ. ಇಂದು ಸಂಜೆಯೊಳಗೆ ಮೊಕದ್ಧಮೆ ದಾಖಲಿಸುತ್ತೇವೆ. ಎಲ್ಲಿ? ಯಾವಾಗ ? ಎಂಬುದನ್ನು ವಕೀಲರು ನೋಡಿಕೊಳ್ಳುತ್ತಾರೆ ಎಂದರು.

ಗುಂಬಾಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡುವೆ ಎಂದು ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಶಾಸಕ ತನ್ವೀರ್ ಸೇಠ್, ಯಾರ ಯಾರ ದೃಷ್ಠಿಯಲ್ಲಿ ಏನೇನು ಕಾಣುತ್ತೆ ಅದೇ ಹೇಳುತ್ತಾರೆ. ಸಂಸದ ಪ್ರತಾಪ್ ಸಿಂಹ ದೃಷ್ಠಿಯಲ್ಲಿ ಅದು ಹೇಗೆ ಕಾಣುತ್ತಿದೆ ಗೊತ್ತಿಲ್ಲ. ಗುಂಬಜ್ ರೀತಿ ಇದ್ದರೆ ಎಲ್ಲವನ್ನೂ ಹೊಡೆದು ಹಾಕ್ತಾರಾ? ಬಸ್ ನಿಲ್ದಾಣ ಆಗಿರುವುದು ಸರ್ಕಾರದ ಹಣದಲ್ಲಿ. ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ರು ಎಂಬುದು ನನಗೆ ಗೊತ್ತಿಲ್ಲ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ ಹೊಡೆದು ಹಾಕೋದಾದ್ರೆ ಅದೆಷ್ಟು ಹೊಡೆದು ಹಾಕುತ್ತಾರೆ ಹೊಡೆದು ಹಾಕಲಿ. ನಾವು ಅದನ್ನು ನೋಡುತ್ತೇನೆ ಎಂದು ಕಿಡಿಕಾರಿದರು.

ಶಾಲೆಗಳಿಗೆ ಕೇಸರಿ ಬಣ್ಣ ವಿಚಾರ. ಯಾರ ಯಾರ ಮನಸಲ್ಲಿ‌ ಏನೇನಿದೆಯೋ ಅದನ್ನೆಲ್ಲ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಮಾಡುವುದು ಸಹಜ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: Tipu- True Dreams -book -file – case – MLA- Tanveer sait