ಪಠ್ಯದಲ್ಲಿ ಟಿಪ್ಪು: ನಿರ್ಧಾರ ತೆಗೆದುಕೊಳ್ಳಲು ಸಮಿತಿ ರಚನೆ, ಸಿಎಂ ಸ್ಪಷ್ಟನೆ

ಬೆಂಗಳೂರು, ಅಕ್ಟೋಬರ್ 31, 2019 (www.justkannada.in): ಪಠ್ಯದಿಂದ ಟಿಪ್ಪು ಸುಲ್ತಾನ್ ವಿಷಯ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಡಾಲರ್ಸ್ ಕಾಲೋನಿ‌ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಟಿಪ್ಪು ಪಠ್ಯ ಬಗ್ಗೆ ಯಾವುದೇ ಗೊಂದಲ ಇಲ್ಲ. ಟಿಪ್ಪು ಸುಲ್ತಾನ್ ಪಠ್ಯದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿ ಮಾಡಿದ್ದಾರೆ. ಆ ಸಮಿತಿ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಷಯದಲ್ಲಿ ಗೊಂದಲ ಏನೂ ಇಲ್ಲ ಎಂದು ಹೇಳಿದರು.

ಆರ್.ಅಶೋಕ್ ಹೇಳಿಕೆ…

ಬಹಳಷ್ಟು ಮಹಾಪುರುಷರ ಇತಿಹಾಸವನ್ನು ಪಠ್ಯದಲ್ಲಿ ತಂದೇ ಇಲ್ಲ. ಪಠ್ಯದಲ್ಲಿ ಬೇಡದೇ ಇರೋರು ಸೇರಿಕೊಂಡಿದ್ದಾರೆ. ಟಿಪ್ಪು ಒಬ್ಬ ಮತಾಂಧ, ಆಕ್ರಮಣಕಾರಿಯಾಗಿದ್ದವ, ಹಿಂದೂ ದ್ವೇಷಿ. ಅವನ ಕುರಿತು ಪಠ್ಯ ಅಗತ್ಯ ಇಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇಡೀ ಜಗತ್ತೇ ದೀಪಾವಳಿ ಆಚರಣೆ ಮಾಡ್ತು. ಆದ್ರೆ ಮೇಲುಕೋಟೆಯಲ್ಲಿ ದೀಪಾವಳಿ ಆಚರಣೆ ಮಾಡಲಿಲ್ಲ. ಮೇಲುಕೋಟೆ ಜನರಿಗೆ ಕರಾಳ ದಿನ ಅದು. ಟಿಪ್ಪು ಮತಾಂಧತೆಯಿಂದ ಹಿಂದೂ ಗಳನ್ನು ಟಾರ್ಗೆಟ್ ಮಾಡಿದ್ದಾತ. ಅಂಥ ವ್ಯಕ್ತಿಯ ಪಠ್ಯ ಬೇಕಿಲ್ಲ ಎಂದು ತಿಳಿಸಿದ್ದಾರೆ.

ಟಿಪ್ಪು ಹೀರೋ ಅಲ್ಲ: ತೇಜಸ್ವಿ ಸೂರ್ಯ

ಇಷ್ಟು ವರ್ಷ ಟಿಪ್ಪು ವನ್ನು ಹೀರೋ ರೀತಿ ಪಠ್ಯದಲ್ಲಿ ಬಿಂಬಿಸಲಾಗಿತ್ತು. ಟಿಪ್ಪು ಹೀರೋ ಅಲ್ಲ ಕ್ರೂರಿ. ಪಠ್ಯದಿಂದ ಅದನ್ನು ತೆಗೆಯುವ ಸಿಎಂ, ಶಿಕ್ಷಣ ಸಚಿವರ ಟಿಪ್ಪು ಕುರಿತ ಪಠ್ಯ ತೆಗೆಯುವ ನಿರ್ಧಾರ ಸ್ವಾಗತಾರ್ಹ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.