ವಸ್ತುವಿನ ಗುಣಮಟ್ಟ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿದೆ: ಸಿಎಂ ಸಿದ್ದರಾಮಯ್ಯ.

ಬೆಂಗಳೂರು,ಜನವರಿ,20,2024(www.justkannada.in): ವಸ್ತುವಿನ ಗುಣಮಟ್ಟ ಹೆಚ್ಚಿಸುವ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿ ಲಾಭದಾಯಕವಾಗಿ ಪ್ರಗತಿ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಇಂದು ಕರ್ನಾಟಕ ಮತ್ತು ಮಾರ್ಜಕ ನಿಯಮಿತದ 21ನೂತನ ವೈವಿದ್ಯಮಯ ಉತ್ಪನ್ನಗಳನ್ನು ಲೋಕಾರ್ಪಣೆ ಗೊಳಿಸಿದರು.  ಕೆ.ಎಸ್.ಡಿ.ಎಲ್ ಸಾಬೂನು, ಡಿಟರ್ಜೆಂಟ್ಸ್, ಸೌಂದರ್ಯವರ್ಧಕಗಳು, ಅಗರಬತ್ತಿ, ಧೂಪ ಸೇರಿದಂತೆ ಒಟ್ಟು 50 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಕ್ಕೆ ಇಂದು ಹೊಸದಾಗಿ 21 ಉತ್ಪನ್ನಗಳು ಸೇರ್ಪಡೆಯಾಗುತ್ತಿದ್ದು, ಇವುಗಳನ್ನು ಮುಖ್ಯಮಂತ್ರಿ  ಸಿದ್ದರಾಮಯ್ಯ ಇಂದು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು,  ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ಮಾಡುವಂತಹ ಗುಣಮಟ್ಟವನ್ನು ನಾವು ಕಾಪಾಡಿಕೊಳ್ಳಬೇಕು. ಇದರಲ್ಲಿ KSDL ಯಶಸ್ಸು ಗಳಿಸಿದೆ. ಸಚಿವ ಎಂ.ಬಿ.ಪಾಟೀಲ್ ಅವರು KSDL ನ ಘನತೆ ಹೆಚ್ಚಿಸಿ ಲಾಭದಾಯಕ ಪ್ರಗತಿ ಕಾಣಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಸರ್ಕಾರಿ ಸಂಸ್ಥೆ ಮತ್ತು ಸರ್ಕಾರಿ ಕಾರ್ಖಾನೆ ಎಂದರೆ ಯಾರೂ ಮೂಗು ಮುರಿಯದಂತಹ ರೀತಿಯಲ್ಲಿ ಪ್ರಗತಿ ಕಾಣಿಸಿ ಮಾದರಿಯಾಗಿ KSDL ಬೆಳವಣಿಗೆ ಕಂಡಿರುವುದಕ್ಕೆ ಎಲ್ಲರಿಗೂ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು.  KSDL ಸಂಸ್ಥೆಯ ಉತ್ಪನ್ನಗಳನ್ನು ನಕಲು ಮಾಡುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು.

ಇಂದು ಬಿಡುಗಡೆಯಾಗಿರುವ ಹೊಸ ಉತ್ಪನ್ನಗಳು ಪ್ರೀಮಿಯಂ ಶ್ರೇಣಿಯ 10 ಬಗೆಯ ಸಾಬೂನು, 3 ತರಹದ ಶವರ್ ಜೆಲ್, 6 ಬಗೆಯ ಸೋಪ್ ಕಿಟ್ ಮತ್ತು ಒಂದು ಬಗೆಯ ಹ್ಯಾಂಡ್ ವಾಶ್ ಆಗಿದೆ.

ಇವುಗಳ ಮಾರಾಟದ ಮೂಲಕ ಸಂಸ್ಥೆಯು ಇನ್ನೂ 1,000 ಕೋಟಿ ರೂ. ಮೌಲ್ಯದ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯು ಅಖಿಲ ಭಾರತ ಮಟ್ಟದ ಮಾರುಕಟ್ಟೆಯನ್ನು ಹೊಂದಲು ಮತ್ತು ವಿದೇಶಗಳಲ್ಲೂ ಸಂಸ್ಥೆಯ ಉತ್ಪನ್ನಗಳು ಸಿಗುವಂತೆ ಮಾಡಲು ರಚನಾತ್ಮಕ ಕ್ರಮಗಳನ್ನು ಸರಕಾರ ಕೈಗೊಂಡಿದೆ.

ಇಂದು ಬಿಡುಗಡೆಯಾಗಿರುವ ಹೊಸ ತರಹದ ಪ್ರೀಮಿಯಂ ಸಾಬೂನುಗಳಲ್ಲಿ Mysore Sandal Wave Termaric, Wave Lime, Wave Deo, Milk Saffron, Almond Soap, Neem Soap, Aloe Soap, Jasmine Cream,  Shikakayi Soap ಇಷ್ಟೂ ಇವೆ. ಜೊತೆಗೆ ಸ್ನಾನಕ್ಕೆ ಬಳಸುವ ಶವರ್-ಜೆಲ್ ಗಳಲ್ಲಿ Mysore Sandal Shower Gel, Gold Shower Gel & Millenium Shower Gel ಇವೆ.

ಇವೆಲ್ಲವೂ ಇಂದಿನ ಬಗೆಬಗೆಯ ಗ್ರಾಹಕರ ಅಭಿರುಚಿಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊರತಂದಿರುವ ಉತ್ಪನ್ನಗಳೇ ಆಗಿವೆ. ಕೆಎಸ್ಡಿಎಲ್ ಸಂಸ್ಥೆಯ ವಾರ್ಷಿಕ ವಹಿವಾಟು ಸದ್ಯಕ್ಕೆ 1,400 ಕೋಟಿ ರೂ.ಗಳ ಆಸುಪಾಸಿನಲ್ಲಿದೆ. ಇದನ್ನು ಮುಂದಿನ ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳ ಮಟ್ಟಕ್ಕೆ ಕೊಂಡೊಯ್ಯುವುದು ಗುರಿಯಾಗಿದೆ.

ಈ ನಿಟ್ಟಿನಲ್ಲಿ, ಸಂಸ್ಥೆಯು ಶಿವಮೊಗ್ಗದಲ್ಲಿ ಹೊಂದಿರುವ ಘಟಕದ ಆವರಣದಲ್ಲಿ ಆಕ್ವಾ ಮಿನರಲ್ ವಾಟರ್ ಘಟಕವನ್ನು ಆರಂಭಿಸುವ ತಯಾರಿ ನಡೆಯುತ್ತಿದೆ. ಜೊತೆಗೆ Transparent Bathing Soap & Perfume Composition ತಯಾರಿಕೆಗೆ ಸಿದ್ಧತೆಗಳು ನಡೆಯುತ್ತಿವೆ.

ಕಾರ್ಯಕ್ರಮದ ವೇಳೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, KSDL ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ್, KSDL consultant ರಜನೀಕಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: 21 new -diversified -products – KSDL -launched – CM -Siddaramaiah.