ಗಡಿ ಪ್ರದೇಶಗಳಲ್ಲಿ ಮತ್ತಷ್ಟು ಬಿಗಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಮೈಸೂರು, ಮೇ 22, 2020 (www.justkannada.in): ರಾಜ್ಯದ ಕೆಲ ಜಿಲ್ಲೆಗಳಿಗೆ 30 ಸಾವಿರಕ್ಕೂ ಹೆಚ್ಚು ಜನ ಬಂದಿದ್ದಾರೆ. ಇನ್ನು ಬಹಳಷ್ಟು ಸಂಖ್ಯೆಯಲ್ಲಿ ಹೊರರಾಜ್ಯದಿಂದ ರಾಜ್ಯಕ್ಕೆ ಬರ್ತಿದ್ದಾರೆ. ಹೀಗಾಗಿ ಅವರ ಕ್ವಾರಂಟೈನ್ ವಿಚಾರದಲ್ಲಿ ಕಠಿಣ ತೀರ್ಮಾನ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೋಮ್ಮಾಯಿ ಹೇಳಿದ್ದಾರೆ.

ತಮಿಳುನಾಡಿನ ಸೇರಿದ ರಾಜ್ಯದ ಗಡಿಗಳಲ್ಲಿ ಅಕ್ರಮ ಪ್ರವೇಶ ನಡೆದಿದೆ. ಮಧ್ಯಮಾರಾಟದ ಸಂದರ್ಭದಲ್ಲಿ ಆ ಸಂಖ್ಯೆ ಹೆಚ್ಚಾಗಿದೆ. ಈಗ ಗಡಿ ಪ್ರದೇಶಗಳಲ್ಲಿ ಮತ್ತಷ್ಟು ಬಿಗಿ ಮಾಡುತ್ತಿದ್ದೇವೆ. ಕೆಲವು ಗಡಿಗಳಿಗೆ ನಾನೇ ಖುದ್ದು ತೆರಳಿ ಬಂದೋಬಸ್ತ್ ವೀಕ್ಷಿಸಿದ್ದೇನೆ. ಹೊರಗಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಎಂದು ಬಸವರಾಜ ಬೋಮ್ಮಾಯಿ ತಿಳಿಸಿದ್ದಾರೆ.