ಹುಣಸೂರು ನಗರ ಸಮೀಪ ಕಾಣಿಸಿಕೊಂಡ ಹುಲಿರಾಯ: ಜನರಲ್ಲಿ ಆತಂಕ

ಮೈಸೂರು.ಡಿಸೆಂಬರ್,13,2025 (www.justkannada.in): ರಾಜ್ಯದಲ್ಲಿ ಹುಲಿ, ಚಿರತೆಗಳ ಹಾವಳಿ ಹೆಚ್ಚುತ್ತಿದ್ದು, ಈ ಮಧ್ಯೆ ಮೈಸೂರು ಜಿಲ್ಲೆಯ ಹುಣಸೂರು ನಗರಕ್ಕೆ ಸಮೀಪದಲ್ಲೇ ಹುಲಿ ಕಾಣಿಸಿಕೊಂಡಿದೆ.

ಹುಣಸೂರು ನಗರಕ್ಕೆ ಮೂರು ಕಿ.ಮೀ ದೂರದಲ್ಲಿರುವ ತಮ್ಮಡಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ. ಮಧ್ಯಾಹ್ನ ನಾಗಮಂಗಲದ ಜಮೀನಿನಲ್ಲಿ  ಕಾಣಿಸಿಕೊಂಡಿದ್ದ ಹುಲಿರಾಯ ಇದೀಗ ತಮ್ಮಡಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು  ಯಶೋಧರ ಪುರದ ಕಡೆಗೆ ಹುಲಿ ಓಡಿ ಹೋಗಿರಬೇಕೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಹುಲಿ ಕಾಣಿಸಿಕೊಳ್ಳುತ್ತಿದ್ದಂತೆ  ಹುಣಸೂರು ಆ್ಯಂಬುಲೆನ್ಸ್ ಚಾಲಕರ ಸಂಘದ ಗ್ರೂಪ್ ನಲ್ಲಿ ಮೆಸೇಜ್ ಹಾಕಲಾಗಿದ್ದು, ಕೂಡಲೇ ಕಾರ್ಯಪ್ರವೃತರಾಗಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು. ಆನೆ, ಚಿರತೆ ಕಾರ್ಯ ಪಡೆಯ ಸಿಬ್ಬಂದಿಗಳು ಜೀಪ್ ಮೂಲಕ  ಹುಲಿ ಪತ್ತೆಗಾಗಿ ಕಾರ್ಯಾಚರಣೆಗಿಳಿದಿದ್ದಾರೆ.

ಆ್ಯಂಬುಲೆನ್ಸ್ ಚಾಲಕರು ಮೈಕ್ ಮೂಲಕ ಹಳ್ಳಿಗಳಲ್ಲಿ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ನಾಗನಹಳ್ಳಿ, ತಮ್ಮಡಹಳ್ಳಿ, ಆಡಿಗನಹಳ್ಳಿ, ನಾಗಮಂಗಲ, ಕಲ್ಲಹಳ್ಳಿ, ಯಶೋಧರಪುರ ಸುತ್ತಮುತ್ತ ಎಚ್ಚರಿಕೆಯಿಂದಿರುವಂತೆ ಜನರಿಗೆ ಮೈಕ್ ಮೂಲಕ ಮಾಹಿತಿ ರವಾನಿಸಿದ್ದಾರೆ.

Key words: Tiger, near, Hunsur city, People