ತೋಟದಲ್ಲಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ದಾರುಣ ಸಾವು.

ಕೊಡಗು,ಡಿಸೆಂಬರ್,16,2025 (www.justkannada.in):  ದುಷ್ಕರ್ಮಿಗಳು ತೋಟದಲ್ಲಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಬಳಿಯ ಶ್ರೀಮಂಗಲದಲ್ಲಿ ಈ ಘಟನೆ ನಡೆದಿದೆ. ಕೆಚ್ಚಟ್ಟೀರ ಅಪ್ಪಯ್ಯ ಎಂಬುವವರ ಜಮೀನಿನಲ್ಲಿ ದುಷ್ಕರ್ಮಿಗಳು ಬೇಲಿಯ ಮೇಲೆ ಉರುಳು ಹಾಕಿದ್ದರು. ಈ ಉರುಳಿಗೆ ಸಿಲುಕಿ ಹುಲಿ ಪ್ರಾಣ ತೆತ್ತಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Tiger, dies, caught, Kodagu