Monday, September 14, 2026

BDA Apartments

ಮುಳ್ಳಂದಿ ಜತೆ ಕಾದಾಡಿ ಮೃತಪಟ್ಟ 5ರಿಂದ 6 ವರ್ಷ ವಯಸ್ಸಿನ ಹುಲಿ BDA JK_Adv BDA Adv
Home Front Page ಮುಳ್ಳಂದಿ ಜತೆ ಕಾದಾಡಿ ಮೃತಪಟ್ಟ 5ರಿಂದ 6 ವರ್ಷ ವಯಸ್ಸಿನ ಹುಲಿ.

ಮುಳ್ಳಂದಿ ಜತೆ ಕಾದಾಡಿ ಮೃತಪಟ್ಟ 5ರಿಂದ 6 ವರ್ಷ ವಯಸ್ಸಿನ ಹುಲಿ.

ಚಾಮರಾಜನಗರ,ಸೆಪ್ಟಂಬರ್,14,2021(www.justkannada.in): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ, ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ಗಂಡತ್ತೂರು ಗಸ್ತಿನ ಸಿಬ್ಬಂದಿಗಳು ಗಸ್ತು ಕಾರ್ಯ ನಡೆಸುತ್ತಿದ್ದ ವೇಳೆ  ಆನೆ ತಡೆ ಕಂದಕದ ಪೊದೆಯೊಂದರಲ್ಲಿ ಸುಮಾರು 05 ರಿಂದ 06 ವರ್ಷ ವಯಸ್ಸಿನ ಗಂಡು ಹುಲಿಯ ಶವ ಪತ್ತೆಯಾಗಿದೆ.

ಮೃತ ಗಂಡು ಹುಲಿಯ ದೇಹವನ್ನು ಪರಿಶೀಲಿಸಿದಾಗ 3-4 ದಿನಗಳ ಹಿಂದೆ ಮುಳ್ಳುಹಂದಿಯನ್ನು ತಿನ್ನಲು ಹೋಗಿ ಮುಳ್ಳಂದಿಯ ಜೊತೆ ಕಾದಾಡಿ, ಹುಲಿಯ ಚುಚ್ಚಿಕೊಂಡಿದ್ದು, ನಂತರ ಹೊರಬಂದು ಕ೦ದಕದ ಮುಂಗಾಲಿನಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಅದು ಸಣ್ಣ-ಪುಟ್ಟ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಲು ಆನೆತಡೆ ಕಂದಕದ ಪೊದೆಯೊ೦ದರಲ್ಲಿ ಪ್ರಯತ್ನಿಸುತ್ತಿದ್ದಾಗ ಹುರುಳಿಗೆ ಒದ್ದಾಡಿ ಮೆದುಳಿನ ರಕ್ತಸ್ರಾವವಾಗಿ ಮೃತಪಟ್ಟಿದೆ ಎನ್ನಲಾಗಿದೆ.

ಈ ಬಗ್ಗೆ ಗುಂಡ್ರೆ ವಲಯದಲ್ಲಿ ಪ್ರಕರಣವನ್ನು ದಾಖಲಾಗಿದೆ.  ಈ ನಡುವೆ ಡಾ. ವಾಸೀಂ ಮಿರ್ಜಾ, ಪಶುವೈದ್ಯಾಧಿಕಾರಿಗಳು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅವರಿಂದ ಮರಣೋತ್ತರ ಶವ ಪರೀಕ್ಷೆ ನಡೆಸಿ, ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎಸ್.ಓ.ಪಿ ಪ್ರಕಾರ ಮಾನ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಂರಕ್ಷಣಾಧಿಕಾರಿ, ಹಾಗೂ ಹೆಡಿಯಾಲ ಕ್ಷೇತ್ರ ನಿರ್ದೇಶಕರು, ಹುಲಿಯೋಜನೆ ಬಂಡೀಪುರ, ಸಹಾಯಕ ಅರಣ್ಯ ವಿಭಾಗ. ಹೆಡಿಯಾಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಗು೦ಡ್ಲುಪೇಟೆ ಉಪ ವಿಭಾಗ, ವನ್ಯಜೀವಿ ಪರಿಪಾಲಕರಾದ ಕೃತಿಕ ಆಲನಹಳ್ಳಿ, ಜೀವನ್ ಕೃಷ್ಣಪ್ಪ, ವನ್ಯಜೀವಿಪರಿಪಾಲಕರು ಹಾಗೂ ಸ್ಥಳೀಯ ಪಂಚಾಯಿತಿದಾರರ ಸಮಕ್ಷಮ ಮೃತ ಹುಲಿಯ ದೇಹವನ್ನು ಸುಡಲಾಯಿತು. ಹೆಚ್ಚಿನ ಮಾಹಿತಿಗಾಗಿ ಮೃತ ಗಂಡು ಹುಲಿಯ ವಿವಿಧ ಅಂಗಾಂಗಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

Key words: tiger – died -fighting – thorn-gundupet