ಬೈಕ್ ಸವಾರನನ್ನೇ ಅಟ್ಟಾಡಿಸಿದ ಹುಲಿರಾಯ: ಮುಂದೇನಾಯ್ತು..?

ಮೈಸೂರು,ಜೂ,30,2019(www.justkannada.in):  ಹುಲಿಯೊಂದು ಓಡುತ್ತಾ ಬೈಕ್ ಸವಾರರ ಮೇಲೆ  ಅಟ್ಯಾಕ್ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದ್ದು ಸದ್ಯ ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಡೀಪುರ- ಊಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಂಡೀಪುರ ರಸ್ತೆಯಲ್ಲಿ ಊಟಿಗೆ ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದಾಗ ಹುಲಿ ಓಡಿಬಂದು ಬೈಕ್ ನ ಹಿಂಬದಿ ಸವಾರನ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತದೆ. ಬೈಕ್ ಸದ್ದಿಗೆ ಬೆಚ್ಚಿ ಬಂದಷ್ಟೆ ವೇಗದಲ್ಲಿ ವ್ಯಾಘ್ರ ಮರೆಯಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಹುಲಿ ಓಡುತ್ತಾ ಹತ್ತಿರ ಬರುತ್ತಿದ್ದಂತೆ ವಿಡಿಯೋ ಮಾಡುತ್ತಿದ್ದ ಹಿಂಬದಿ ಸವಾರನ ಭಯದ ಕೂಗು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ,ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದೆ.

Key words: tiger -chases – bike rider- Bandipur – Ooty Road