“ಟಿಕೆಟ್‌ ಗಾಗಿ ಪಕ್ಷದ ವರಿಷ್ಠರಿಗೆ ಮನವಿ” : ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್

ಬೆಂಗಳೂರು,ಮಾರ್ಚ್,07,2021(www.justkannada.in) :  ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ. ಟಿಕೆಟ್‌ಗಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಟಿಕೆಟ್ ಸಿಗುವ ಭರವಸೆ ಇದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

jkಈಗಾಗಲೇ ನನಗೆ 66 ವರ್ಷ ವಯಸ್ಸಾಗಿದೆ. ಇದೇ ನನ್ನ ಕೊನೆ ಚುನಾವಣೆ. ಹೀಗಾಗಿ, ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ. ಟಿಕೆಟ್‌ ವಿಚಾರವಾಗಿ ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಟಿಕೆಟ್‌ ಸಿಗುವ ಭರವಸೆ ಇದೆ.

tickets-Party-elderly-Request-Sriramasena-Founder-Muthalik-Pramo 

ಇನ್ನೂ ಮೂರು ವರ್ಷ ಅವಧಿ ಇದ್ದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅಭಿವೃದ್ಧಿ,ಹಿಂದುತ್ವದ ಕೆಲಸ ಮಾಡುತ್ತೇನೆ. ಒಂದು ವೇಳೆ ಟಿಕೆಟ್‌ ಸಿಗದೆ ಸುರೇಶ್‌ ಅಂಗಡಿಯವರ ಕುಟುಂಬಕ್ಕೋ, ಜಗದೀಶ್‌ ಶೆಟ್ಟರ್‌ ಕುಟುಂಬಕ್ಕೋ ಕೊಟ್ಟರೆ ಅವರು ನನ್ನನ್ನು ಪ್ರಚಾರಕ್ಕೆ ಕರೆದರೆ ಅವರ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

key words : tickets-Party-elderly-Request-Sriramasena-Founder-Muthalik-Pramo